ಏಕದಿನ ಕ್ರಿಕೆಟ್ ನಲ್ಲಿ 7000 ರನ್: ಮಿಥಾಲಿ ರಾಜ್ ಹೊಸ ದಾಖಲೆ

ಭಾನುವಾರ, 14 ಮಾರ್ಚ್ 2021 (13:40 IST)
ಲಕ್ನೋ: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಬ್ಯಾಟಿಂಗ್ ನಲ್ಲಿ ಹೊಸ ವಿಶ್ವದಾಖಲೆ ಮಾಡಿದ್ದಾರೆ. ಏಕದಿನ ಪಂದ್ಯಗಳಲ್ಲಿ 7000 ರನ್ ಗಳಿಸಿದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.


ದ.ಆಫ್ರಿಕಾ ತಂಡದ ವಿರುದ್ಧ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಮಿಥಾಲಿ 45 ರನ್ ಗಳಿಸಿದ್ದಾರೆ. ಇದರ ಜೊತೆಗೆ ಅವರು ಏಕದಿನ ಪಂದ್ಯಗಳಲ್ಲಿ 7000 ರನ್ ಪೂರೈಸಿದ ದಾಖಲೆ ಮಾಡಿದರು.

ಕಳೆದ ಪಂದ್ಯದಲ್ಲಿ ಮಿಥಾಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ ಎರಡನೇ ಮಹಿಳಾ ಆಟಗಾರ್ತಿ ಎಂಬ ದಾಖಲೆ ಮಾಡಿದ್ದರು. ಮಹಿಳಾ ಕ್ರಿಕೆಟ್ ನ ಸಚಿನ್ ತೆಂಡುಲ್ಕರ್ ಎಂದೇ ಪರಿಗಣಿಸಲಾಗುವ ಮಿಥಾಲಿ ಇಂದು ಹೊಸ ವಿಕ್ರಮ ಮೆರೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ