ಮಹಮ್ಮದ್ ಅಮೀರ್‌ಗೆ ಪಾಕ್ ಬೌಲಿಂಗ್ ದಾಳಿಯ ಸಾರಥ್ಯ: ವಾಸಿಂ ಅಕ್ರಂ

ಮಂಗಳವಾರ, 5 ಜುಲೈ 2016 (20:05 IST)
ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿ ನಿಷೇಧದ ಶಿಕ್ಷೆ ಅನುಭವಿಸಿದ ಮೊಹಮ್ಮದ್ ಅಮೀರ್ ಲಾರ್ಡ್ಸ್‌ನಲ್ಲಿ ಮುಂದಿನ ವಾರ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ  ಬೌಲಿಂಗ್ ದಾಳಿಯ ಸಾರಥ್ಯ ವಹಿಸಲಿದ್ದಾರೆ ಎಂದು ವಾಸಿಂ ಅಕ್ರಂ ಹೇಳಿದ್ದಾರೆ. ಇಂಗ್ಲೆಂಡ್ ಅಭಿಮಾನಿಗಳಿಂದ ನಿರೀಕ್ಷಿತ ವೈರತ್ವಕ್ಕೆ ಅಮೀರ್ ಬೆದರುವುದಿಲ್ಲ ಎಂದು ಅಕ್ರಂ ಹೇಳಿದರು. 
 
ಎಡಗೈ ವೇಗಿ ಅಮೀರ್ ಇಂಗ್ಲೆಂಡ್ ಅಭಿಮಾನಿಗಳ ನಿರೀಕ್ಷಿತ ಹಂಗಿಸುವಿಕೆ ಮತ್ತು ಲೇವಡಿ ಲೆಕ್ಕಿಸದೇ ಮೈದಾನದಲ್ಲಿ ತಮ್ಮ ಬೌಲಿಂಗ್ ಮೊನಚು ಪ್ರದರ್ಶಿಸಲಿದ್ದಾರೆ ಎಂದು ವಾಸಿಂ ಹೇಳಿದರು.
 
 ಮೈದಾನದಲ್ಲಿ ಆಟದ ಮೋಜನ್ನು ಅನುಭವಿಸುವಂತೆ ನಾನು ಅವನಿಗೆ ಸಲಹೆ ಮಾಡಿದ್ದೇನೆ. ಅವನಿಗೆ ವೇಗ ಮತ್ತು ಕೌಶಲ್ಯ ಎರಡೂ ಇದ್ದು ಶ್ರೇಷ್ಟ ಬೌಲಿಂಗ್‌ಗೆ ಯತ್ನಿಸಬಹುದು ಎಂದು ಅಕ್ರಂ ಹೇಳಿದರು. 
 
 ಎಡಗೈ ಸ್ಪಿನ್ನರ್ ಯಾಸಿರ್ ಶಾಹ್ ಜತೆ ಅವರು ಮಾರಕ ಜೋಡಿಯಾಗಬಲ್ಲರು ಎಂದು ಅಕ್ರಂ ಹೇಳಿದರು. ಯಾಸಿರ್ ಶಾಹ್ ಉದ್ದೀಪನ ಮದ್ದು ಸೇವನೆ ನಿಷೇಧದಿಂದ ಹಿಂತಿರುಗುತ್ತಿದ್ದು, ಪಾಕಿಸ್ತಾನದ ಅತ್ಯಧಿಕ ಶ್ರೇಯಾಂಕದ ಬೌಲರ್ ಆಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ