ಟ್ರೋಫಿ ಕದ್ದೊಯ್ದ ಮೊಹ್ಸಿನ್ ನಖ್ವಿ ಭಾರತದ ವಿರುದ್ಧವೇ ಟ್ವೀಟ್: ಕೆಲವೇ ಕ್ಷಣಗಳಲ್ಲಿ ಎಕ್ಸ್ ಖಾತೆ ಬ್ಯಾನ್
ಏಷ್ಯಾ ಕಪ್ ಗೆದ್ದ ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ ಆಟದಲ್ಲೂ ಆಪರೇಷನ್ ಸಿಂಧೂರ್ ನಡೆದಿದೆ. ಎಲ್ಲೇ ಇದ್ದರೂ ಗೆಲುವು ಭಾರತದ್ದೇ ಎಂದು ಮೋದಿ ಅಗ್ರೆಸಿವ್ ಆಗಿ ಟ್ವೀಟ್ ಮಾಡಿದ್ದರು.
ಅವರ ಈ ಟ್ವೀಟ್ ಗೆ ಪ್ರತಿಯಾಗಿ ಮೊಹ್ಸಿನ್ ನಖ್ವಿ ಯುದ್ಧವನ್ನು ಕ್ರೀಡೆಗೆ ಎಳೆದು ತರೋದು ಹತಾಶೆಯನ್ನು ತೋರಿಸುತ್ತದೆ. ಯುದ್ಧವೇ ನಿಮ್ಮ ಮಾನದಂಡವಾದರೆ ಪಾಕಿಸ್ತಾನದ ಕೈಯಲ್ಲಿ ನೀವು ಅನುಭವಿಸಿದ ಅವಮಾನಕರ ಸೋಲಿನ ಇತಿಹಾಸವನ್ನು ಈಗಾಗಲೇ ದಾಖಲಿಸಲಾಗಿದೆ ಎಂದಿದ್ದರು.
ಅವರು ಇಂತಹದ್ದೊಂದು ಟ್ವೀಟ್ ಮಾಡುತ್ತಿದ್ದಂತೇ ಭಾರತದಲ್ಲಿ ಅವರ ಎಕ್ಸ್ ಖಾತೆಯನ್ನೇ ಬ್ಯಾನ್ ಮಾಡಲಾಗಿದೆ. ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನದ ಅನೇಕ ಸೆಲೆಬ್ರಿಟಿಗಳು, ರಾಜಕಾರಣಿಗಳು, ಕ್ರಿಕೆಟಿಗರ ಎಕ್ಸ್ ಖಾತೆಯನ್ನು ಬ್ಯಾನ್ ಮಾಡಲಾಗಿತ್ತು.