ಕ್ಯಾಸಿನೋಗೆ ಭೇಟಿ ನೀಡಿದ ಮೊಯಿನ್ ಖಾನ್ ತವರಿಗೆ ವಾಪಸ್

ಮಂಗಳವಾರ, 31 ಮಾರ್ಚ್ 2015 (17:11 IST)
ಅನೇಕ ವರ್ಷಗಳಿಂದ  ಪಾಕಿಸ್ತಾನದ ವಿಶ್ವಕಪ್ ಅಭಿಯಾನಗಳಲ್ಲಿ  ದುರದೃಷ್ಟಕರ ಘಟನೆಗಳಿಂದ ಕಪ್ಪು ಚುಕ್ಕೆಗಳು ಮೂಡಿವೆ. 2015ರ ವಿಶ್ವಕಪ್ ಕೂಡ ಇದಕ್ಕೆ ಭಿನ್ನವಾಗಿಲ್ಲ. ಪಾಕಿಸ್ತಾನದ ಮುಖ್ಯ ಆಯ್ಕೆದಾರ ಮೊಯಿನ್ ಖಾನ್ ಅವರನ್ನು ಮನೆಗೆ ಹಿಂತಿರುಗುವಂತೆ ಪಾಕ್ ಕ್ರಿಕೆಟ್ ಮಂಡಳಿ ಆದೇಶ ನೀಡಿದ ಘಟನೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತು.  ಮಾಜಿ ಕ್ರಿಕೆಟರ್ ಮೊಯಿನ್ ಖಾನ್ ವೆಸ್ಟ್ ಇಂಡೀಸ್ ವಿರುದ್ಧ ವಿಶ್ವಕಪ್ ಪಂದ್ಯಕ್ಕೆ ಎರಡು ದಿನಗಳ ಮುಂಚೆ ಕ್ಯಾಸಿನೋದಲ್ಲಿ ಕಾಲಕಳೆಯುತ್ತಿದ್ದುದನ್ನು ಪತ್ತೆಹಚ್ಚಲಾಯಿತು.
 
ಆಯ್ಕೆದಾರರಾಗಿ ಮೊಯಿನ್ ಪ್ರವಾಸಿ ತಂಡದ ಅಧಿಕೃತ ಸದಸ್ಯರಲ್ಲ. ಇದಲ್ಲದೇ ಅವರು ಶಿಸ್ತಿನ ನೀತಿ ಸಂಹಿತೆಯನ್ನು ಮುರಿದಿರಲಿಲ್ಲ.  ಪಾಕಿಸ್ತಾನದಲ್ಲಿ ಜೂಜು ಕಾನೂನುಬಾಹಿರವಾಗಿರುವುದರಿಂದ ಕ್ಯಾಸಿನೋದಲ್ಲಿ ಅವರ ಉಪಸ್ಥಿತಿ ಕೋಲಾಹಲವೆಬ್ಬಿಸಿತು. ಪಿಸಿಬಿ ಮುಖ್ಯಸ್ಥ ಶಹರ್‌ಯಾರ್ ಖಾನ್ ಅವರಲ್ಲಿ ಮೊಯಿನ್ ಕ್ಷಮೆ ಯಾಚಿಸಿದರಾದರೂ ತಾವು ಅಲ್ಲಿಗೆ ಕೆಲವು ಸ್ನೇಹಿತರ ಜೊತೆ ಭೋಜನಕ್ಕೆ ಹೋಗಿದ್ದಾಗಿ ಸ್ಪಷ್ಟನೆ ನೀಡಿದರು. 
 
 ವಿಶ್ವಕಪ್ ಪಂದ್ಯಾವಳಿಯ ಮಧ್ಯದಲ್ಲೇ ಮನೆಗೆ ಹೋದವರು ಮೊಯಿನ್ ಒಬ್ಬರೇ ಅಲ್ಲ. ಸ್ಕಾಟ್‌ಲೆಂಡ್ ಪ್ರಮುಖ ಬೌಲರ್ ಮಜೀದ್ ಹಕ್ ಅವರನ್ನು ದೇಶದ ಕ್ರಿಕೆಟ್ ಮಂಡಳಿ ವಜಾ ಮಾಡಿತು. ಮಜೀದ್ ಹಕ್ ಅವರನ್ನು ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಕೈಬಿಡಲಾಗಿದ್ದರಿಂದ ಇದು ಜನಾಂಗೀಯ ಅನ್ಯಾಯ ಎಂದು ಟ್ವೀಟ್ ಮಾಡಿದ್ದರು. ಅಲ್ಪಸಂಖ್ಯಾತರಾಗಿರುವಾಗ ತುಂಬಾ ಕಠಿಣವಾಗಿರುತ್ತದೆ ಎಂದು ಟ್ವೀಟ್ ಮಾಡಿ ನಂತರ ಡಿಲೀಟ್ ಮಾಡಿದ್ದರು. 

ವೆಬ್ದುನಿಯಾವನ್ನು ಓದಿ