ಬಾಂಗ್ಲಾ ನಾಯಕ ಮೊರ್ತಾಜಾಗೆ ಡೆಂಗ್ಯೂ ಜ್ವರ

ಶುಕ್ರವಾರ, 9 ಅಕ್ಟೋಬರ್ 2015 (19:10 IST)
ಬಾಂಗ್ಲಾದೇಶ ಏಕ ದಿನ ಅಂತಾರಾಷ್ಟ್ರೀಯ ಪಂದ್ಯದ ನಾಯಕ ಮಶ್ರಫೆ ಬಿನ್ ಮೊರ್ತಾಜಾ ಅವರಿಗೆ ಡೆಂಗ್ಯೂ ಜ್ವರ ಗುರುತಿಸಿದ ಬಳಿಕ ಶುಕ್ರವಾರ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮುಶ್ರಫಾ ಅವರನ್ನು ಅಪೊಲೋ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರಿಗೆ ಇನ್ನೂ ತುಂಬಾ ಜ್ವರವಿದೆ ಎಂದು ಮೊರ್ತಾಜಾ ಸ್ನೇಹಿತರೊಬ್ಬರು ತಿಳಿಸಿದ್ದಾರೆ.

 ಡೆಂಗ್ಯೂ ಕಾಯಿಲೆಯಿಂದಾಗಿ ನ್ಯಾಷನಲ್ ಲೀಗ್ ಮೂರನೇ ಸುತ್ತಿನಲ್ಲಿ ಅವರು ಆಡಲು ಸಾಧ್ಯವಾಗುವುದಿಲ್ಲ. ಮೊರ್ತಾಜಾ ಪರಿಸ್ಥಿತಿಯ ಬಗ್ಗೆ ತಾವು ವಿವರ ಪಡೆಯಬೇಕಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ವೈದ್ಯೆ ದೇಬಶೀಶ್ ಚೌಧರಿ ತಿಳಿಸಿದ್ದಾರೆ.

ಮಶ್ರಫೆ ಅವರ ಒಂದು ವರ್ಷದ ಪುತ್ರ ಸೊಹೆಲ್ ಕೂಡ ಕಳೆದ ಕೆಲವು ದಿನಗಳಿಂದ ತೀವ್ರ ಜ್ವರದಿಂದ ನರಳುತ್ತಿದ್ದಾರೆ. 
 

ವೆಬ್ದುನಿಯಾವನ್ನು ಓದಿ