ಅಸಾಮಾನ್ಯ ವೆಸ್ಟ್ ಇಂಡೀಸ್ ವಿರುದ್ಧ ಕುತೂಹಲಕಾರಿ ಸರಣಿ : ಧೋನಿ

ಶನಿವಾರ, 27 ಆಗಸ್ಟ್ 2016 (10:13 IST)
ವೆಸ್ಟ್ ಇಂಡೀಸ್ ತಂಡವನ್ನು ಅಸಾಮಾನ್ಯ ತಂಡವೆಂದು ಬಣ್ಣಿಸಿದ ಭಾರತದ ಸೀಮಿತ ಓವರುಗಳ ನಾಯಕ ಧೋನಿ ಹಾಲಿ ವಿಶ್ವ ಟಿ 20 ಚಾಂಪಿಯನ್ನರ ವಿರುದ್ಧ ಮುಂಬರುವ ಎರಡು ಪಂದ್ಯಗಳ ಸರಣಿ ಕುತೂಹಲಕಾರಿಯಾಗಿದೆ ಎಂದಿದ್ದಾರೆ.
 
ನಾಲ್ಕು ಟೆಸ್ಟ್ ಸರಣಿಯಲ್ಲಿ ವಿರಾಕ್ ಕೊಹ್ಲಿ ಬಳಗ ವೆಸ್ಟ್ ಇಂಡೀಸ್ ತಂಡವನ್ನು 2-0ಯಿಂದ ಸೋಲಿಸಿದ್ದರೂ, ಕ್ಯಾರಿಬಿಯನ್ ತಂಡ ವಿಶ್ವ ದರ್ಜೆಯ ಹಿಟ್ಟರ್‌ಗಳು ಮತ್ತು ಆಲ್‌ರೌಂಡರ್‌ಗಳ ನೆರವಿನಿಂದ ಟಿ 20 ಮಾದರಿಯಲ್ಲಿ ಶಕ್ತಿಕೇಂದ್ರವಾಗಿದೆ ಎಂದು ಧೋನಿ ನಂಬಿದ್ದಾರೆ.
 
ಕಿರು ಮಾದರಿಯ ಆಟದಲ್ಲಿ ವೆಸ್ಟ್ ಇಂಡೀಸ್ ಅಸಮಾನ್ಯವಾಗಿದೆ. ಸಾಕಷ್ಟು ಪವರ್ ಹಿಟ್ಟರ್‌ಗಳು ಮತ್ತು ಆಲ್‌ರೌಂಡರ್‌ಗಳಿಂದ ಅದು ಸಮತೋಲಿತ ತಂಡವಾಗಿದೆ. ಅವರು ಪ್ರಸಕ್ತ ವಿಶ್ವ ಟಿ 20 ಚಾಂಪಿಯನ್ನರಾದ್ದರಿಂದ ಇದೊಂದು ಕುತೂಹಲಕಾರಿ ಸರಣಿಯಾಗಲಿದೆ ಎಂದು ಧೋನಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಫ್ಲೋರಿಡಾದ ಸೆಂಟ್ರಲ್ ಬ್ರೊವಾರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ಆರಂಭಿಕ ಪಂದ್ಯದ ಅಂಗವಾಗಿ ಧೋನಿ ಮಾತನಾಡುತ್ತಿದ್ದರು.
 
ಅಮೆರಿಕದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಭಾರತ ಆಡುತ್ತಿರುವುದು ಇದೇ ಮೊದಲಾಗಿದ್ದು, ಲಾಡರ್‌ಹಿಲ್‌ನಲ್ಲಿ ಮೂಲಸೌಲಭ್ಯಗಳ ಬಗ್ಗೆ ಧೋನಿಗೆ ತೃಪ್ತಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ