ಯುವ ಆಟಗಾರರ ಬಗ್ಗೆ ಧೋನಿ ಮಾತು

ಗುರುವಾರ, 27 ಅಕ್ಟೋಬರ್ 2016 (11:44 IST)
ರಾಂಚಿ: ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲಲು ಬ್ಯಾಟ್ಸ್ ಮನ್ ಗಳ ಕಳಪೆ ಶಾಟ್ ಸೆಲೆಕ್ಷನ್ ಕಾರಣ ಎಂದು ಎಲ್ಲರೂ ಟೀಕಿಸುತ್ತಿದ್ದರೆ ನಾಯಕ ಧೋನಿ ಮಾತ್ರ ತಮ್ಮ ಹುಡುಗರನ್ನು ಸಮರ್ಥಿಸಿಕೊಂಡಿದ್ದಾರೆ.

“ಯುವ ಆಟಗಾರರು ತಮ್ಮ ಸಹಜ ಆಟವಾಡಬೇಕು. ಅವರಲ್ಲಿ ದೊಡ್ಡ ಹೊಡೆತಗಳಿಗೆ ಕೈ ಹಾಕಬೇಡಿ ಎಂದು ಹೇಗೆ ಹೇಳಲಿ? ಅದು ಅವರ ಬೆಳವಣಿಗೆಗೆ ಒಳ್ಳೆಯದಲ್ಲ” ಎಂದು ಧೋನಿ ತಮ್ಮ ಯುವ ಆಟಗಾರರ ಪರ  ಬ್ಯಾಟಿಂಗ್ ಮಾಡಿದ್ದಾರೆ.

ಸದಾ ಯುವ ಆಟಗಾರರನ್ನೇ ಬೆಂಬಲಿಸುವ ನಾಯಕ ಇಲ್ಲಿಯೂ ಅವರನ್ನು ಬಿಟ್ಟುಕೊಟ್ಟಿಲ್ಲ. ಯುವಕರು ಮಧ್ಯಮ ಕ್ರಮಾಂಕಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗಬಹುದು. ಹಾಗೆಂದು ಅವರ ಸಹಜ ಆಟ ಆಡಬೇಡಿ ಎನ್ನುವುದು ಸರಿಯಲ್ಲ ಎಂದು ಧೋನಿ ಅಭಿಪ್ರಾಯಪಟ್ಟಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ದಯನೀಯ ವೈಫಲ್ಯ ಕಂಡ ಹಿನ್ನೆಲೆಯಲ್ಲಿ ದೆಹಲಿ ಮತ್ತು ರಾಂಚಿ ಏಕದಿನ ಪಂದ್ಯಗಳಲ್ಲಿ ರನ್ ಚೇಸ್ ಮಾಡುವಾಗ ಭಾರತ ಕೆಲವೇ ರನ್ ಗಳ ಅಂತರದಿಂದ ಸೋತಿತ್ತು. ಈ ಹಿನ್ನೆಲೆಯಲ್ಲಿ ಭಾರತ ಬ್ಯಾಟ್ಸ್ ಮನ್ ಗಳ ಬಗ್ಗೆ ಟೀಕೆಗಳು ಕೇಳಿ ಬಂದಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ