ಮುಂಬೈ ಟೆಸ್ಟ್ ನಲ್ಲಿ ಉಭಯ ತಂಡಗಳು ಬರೆದವು ವಿನೂತನ ದಾಖಲೆ

ಶನಿವಾರ, 10 ಡಿಸೆಂಬರ್ 2016 (11:35 IST)
ಮುಂಬೈ; ಭಾರತ-ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಒಂದು ವಿನೂತನ ದಾಖಲೆ ಮಾಡಿದವು. ಈ ಪಂದ್ಯದಲ್ಲಿ ಐಸಿಸಿ ಶ್ರೇಯಾಂಕದ ಟಾಪ್ 10 ಬ್ಯಾಟ್ಸ್ ಮನ್ ಗಳ ಪೈಕಿ 4 ಬ್ಯಾಟ್ಸ್ ಮನ್ ಗಳು ಆಡುತ್ತಿರುವುದೇ ಆ ವಿಶಿಷ್ಟ ದಾಖಲೆ.

ಜೋ ರೂಟ್ (2), ವಿರಾಟ್ ಕೊಹ್ಲಿ (3), ಚೇತೇಶ್ವರ ಪೂಜಾರ (8), ಜೆ ಬೇರ್ ಸ್ಟೋ (10) ಈ ಪಂದ್ಯದಲ್ಲಿ ಆಡುತ್ತಿದ್ದಾರೆ. ಈ ನಡುವೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 4000 ರನ್ ಪೂರೈಸಿದರು. ವೇಗವಾಗಿ 4000 ರನ್ ಗಳಿಸಿದ ಆರನೇ ಬ್ಯಾಟ್ಸ್ ಮನ್ ಎಂಬ ಗೌರವಕ್ಕೆ ಪಾತ್ರರಾದರು.  41 ರನ್ ಗಳಿಸಿದಾಗ ಕೊಹ್ಲಿ ಈ ಸಾಧನೆ ಮಾಡಿದರು.

ಇನ್ನು ಟೀಂ ಇಂಡಿಯಾ ಆರಂಭಿಕ ಮುರಳಿ ವಿಜಯ್ ಮರಳಿ ಫಾರ್ಮ್ ಗೆ ಬಂದಿದ್ದು ಟೆಸ್ಟ್ ಕ್ರಿಕೆಟ್ ನಲ್ಲಿ ಎಂಟನೇ ಶತಕ ದಾಖಲಿಸಿದರು. ಇವರ ಆಟದ ನೆರವಿನಿಂದ ಟೀಂ ಇಂಡಿಯಾ ಊಟದ ವಿರಾಮದ ವೇಳೆಗೆ 2ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿತ್ತು. ಮುರಳಿ ವಿಜಯ್ 124 ಮತ್ತು ಕೊಹ್ಲಿ 44 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಭಾರತ ಇನ್ನೂ 153 ರನ್ ಗಳ ಹಿನ್ನಡೆಯಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ