ಮಾತು ಉಳಿಸಿಕೊಂಡ ಮುರಳಿ ವಿಜಯ್

ಶುಕ್ರವಾರ, 9 ಡಿಸೆಂಬರ್ 2016 (16:54 IST)
ಮುಂಬೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ದಿಟ್ಟ ಉತ್ತರ ನೀಡುತ್ತಿದೆ. ಕೋಚ್ ಅನಿಲ್ ಕುಂಬ್ಳೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳುವಂತಹ ಇನಿಂಗ್ಸ್ ಆಡುವುದರತ್ತ ಮುರಳಿ ವಿಜಯ್ ಹೆಜ್ಜೆ ಹಾಕಿದ್ದಾರೆ.

ಕಳೆದ ಎರಡು ಪಂದ್ಯಗಳಲ್ಲಿ ಬೇಗನೇ ಔಟಾಗಿ ಟೀಕಾ ಪ್ರಹಾರಕ್ಕೊಳಗಾಗಿದ್ದ ಮುರಳಿ ವಿಜಯ್ ಬಗ್ಗೆ ನಾಲ್ಕನೇ ಪಂದ್ಯಾರಂಭಕ್ಕೆ ಮುನ್ನ ಕೋಚ್ ಅನಿಲ್ ಕುಂಬ್ಳೆ ಸದ್ಯದಲ್ಲೇ ಅವರಿಂದ ದೊಡ್ಡ ಇನಿಂಗ್ಸ್ ನಿರೀಕ್ಷಿಸಬಹುದು ಎಂದಿದ್ದರು. ಆ ಭರವಸೆಯನ್ನು ಅವರು (70)  ಅರ್ಧಶತಕ ಗಳಿಸುವ ಮೂಲಕ ಜೀವಂತವರಿಸಿದ್ದಾರೆ.

ಜತೆಗೆ ಇಂಗ್ಲೆಂಡ್ ನ ಮೊದಲ ಇನಿಂಗ್ಸ್ ಮೊತ್ತವಾದ 400 ರನ್ ಗಳಿಗೆ ಟೀಂ ಇಂಡಿಯಾ ದಿಟ್ಟ ಉತ್ತರ ನೀಡುತ್ತಿದೆ. ದ್ವಿತೀಯ ದಿನದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿದೆ. ಇದರೊಂದಿಗೆ ಮೊದಲ ಇನಿಂಗ್ಸ್ ನಲ್ಲಿ ಇನ್ನೂ 254 ರನ್ ಹಿನ್ನಡೆಯಲ್ಲಿದೆ.

ವಿಜಯ್ ಜತೆ ಆಡುತ್ತಿರುವ ಚೇತೇಶ್ವರ ಪೂಜಾರ ಕೂಡಾ 47 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದಾರೆ. ಇಬ್ಬರೂ ಕ್ರೀಸ್ ಗೆ ಅಂಟಿಕೊಂಡಿದ್ದಾರೆ. ನಾಳೆಯೂ ಸ್ವಲ್ಪ ಹೊತ್ತು ಇವರು ಮೊತ್ತ ಹೆಚ್ಚಿಸಿದರೆ ಉಳಿದ ಬ್ಯಾಟ್ಸ್ ಮನ್ ಗಳಿಗೆ ರನ್ ಗಳಿಸುವುದು ಸುಲಭವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ