ನನ್ನ ಧೋನಿಯ ಸಂಬಂಧ ತಂದೆ-ಮಗುವಿನಂತೆ: ಮೊಹಮ್ಮದ್ ಶಮಿ

ಭಾನುವಾರ, 25 ಡಿಸೆಂಬರ್ 2016 (16:41 IST)
ವಿರಾಟ್ ಕೊಹ್ಲಿ ಪರ್ಯಾಯ ನಾಯಕನಾಗಿ ಹೊರಹೊಮ್ಮಿದ್ದರೂ ಮಹೇಂದ್ರ ಸಿಂಗ್ ಧೋನಿಯ ಪ್ರಭಾವ ತಂಡದ ಆಟಗಾರರ ಮೇಲೆ ಕಡಿಮೆಯಾಗಿಲ್ಲ. ಆಟಗಾರರ ಪ್ರೀತಿ ಪಡೆದ ಧೋನಿ ಹೆಮ್ಮೆಯ ನಾಯಕರಾಗಿದ್ದಾರೆ.

ಟೀಂ ಇಂಡಿಯಾ ತಂಡದಲ್ಲಿರುವ ಉತ್ತರಪ್ರದೇಶದಲ್ಲಿ ಅಮ್ರೋಹಾ ಜಿಲ್ಲೆಯ ನಿವಾಸಿಯಾದ 26 ವರ್ಷ ವಯಸ್ಸಿನ ಮೊಹಮ್ಮದ್ ಶಮಿ, ಧೋನಿ ಮತ್ತು ನನ್ನ ನಡುವಿನ ಸಂಬಂಧ ತಂದೆ-ಮಗನಂತೆ ಎಂದು ವರ್ಣಿಸಿದ್ದಾರೆ.    
 
ನಮ್ಮಿಬ್ಬರ ನಡುವಿನ ಸಂಬಂಧ ತಂದೆ-ಮಗುವಿನಂತೆ. ಇದಕ್ಕಿಂತ ಹೆಚ್ಚಿಗೆ ಹೇಳಲು ಸಾಧ್ಯವಿಲ್ಲ ಎಂದು ಶಮಿ ಹೇಳಿದ್ದಾರೆ.
 
ಐಸಿಸಿಯಿಂದ ವರ್ಷದ ಕ್ರಿಕೆಟಿಗ ಪ್ರಶಸ್ತಿ ಪಡೆದ ರವಿಚಂದ್ರನ್ ಅಶ್ವಿನ್, ಧನ್ಯವಾದ ಅರ್ಪಿಸುವ ಸಮಾರಂಭದಲ್ಲಿ ಧೋನಿ ಹೆಸರನ್ನು ಉಲ್ಲೇಖಿಸದಿರುವುದು ಧೋನಿ ಅಭಿಮಾನಿಗಳ ನಿರಾಶೆಗೆ ಕಾರಣವಾಗಿತ್ತು. 
 
ಮೊಹಮ್ಮದ್ ಶಮಿ ಮಂಡಿ ಗಾಯದಿಂದ ಬಳಲುತ್ತಿರುವುದರಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯದಿಂದಾಗಿ ಶಮಿ ಇಂಗ್ಲೆಂಡ್ ಸರಣಿಯಿಂದ ದೂರ ಉಳಿಯಬೇಕಾಗಿ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ