ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕತ್ವ ಬಿಟ್ಟುಕೊಟ್ಟ ಎನ್. ಶ್ರೀನಿವಾಸನ್

ಶನಿವಾರ, 2 ಮೇ 2015 (13:28 IST)
ಅಧಿಕೃತವಾಗಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಐಪಿಎಲ್ ಲೀಗ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕರಾಗಿಲ್ಲ. ವರದಿಗಳ ಪ್ರಕಾರ, ಶ್ರೀನಿವಾಸನ್  ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯ ಮಾಲೀಕರಾಗಿದ್ದ ಇಂಡಿಯಾ ಸಿಮೆಂಟ್ಸ್‌ನ ಶೇ. 29ರಷ್ಟು ಷೇರುಗಳನ್ನು ಕ್ರಿಕೆಟರ್ ಟ್ರಸ್ಟ್‌ಗೆ ವರ್ಗಾವಣೆ ಮಾಡಿದ್ದಾರೆ. 
 
ಸಿಎಸ್‌ಕೆ ಹುಟ್ಟಿದ ಶೇ. 29ರಷ್ಟು ಆದಾಯವು ಇಂಡಿಯಾ ಸಿಮೆಂಟ್ಸ್ ಕ್ರಿಕೆಟರ್ಸ್ ಟ್ರಸ್ಟ್‌ಗೆ ಹೋಗಲಿದೆ. ಇಂಡಿಯಾ ಸಿಮೆಂಟ್ಸ್ ನೇಮಿಸಿಕೊಂಡ ಮಾಜಿ ಕ್ರಿಕೆಟಿಗರ ಯೋಗಕ್ಷೇಮವನ್ನು ಇದು ನೋಡುತ್ತದೆ. ನನ್ನ ಹಿನ್ನೆಲೆ ಮತ್ತು ಇತಿಹಾಸವು ಕ್ರಿಕೆಟ್‌ಗೆ ಬೆಂಬಲಿಸುವುದಾಗಿದೆ ಎಂದು ಶ್ರೀನಿವಾಸನ್ ರಾಷ್ಟ್ರೀಯ ದಿನಪತ್ರಿಕೆಯೊಂದಕ್ಕೆ ಹೇಳಿದ್ದರು.
 
 ಟ್ರಸ್ಟ್ ನೇಮಕ ಮತ್ತು ಮಾಲೀಕತ್ವದ ಹಕ್ಕುಗಳನ್ನು ಟ್ರಸ್ಟ್‌ಗೆ ವರ್ಗಾಯಿಸಿದ ಪ್ರಕ್ರಿಯೆ ಮುಕ್ತಾಯವಾಗಿದ್ದು, ಬಿಸಿಸಿಐಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಮೂಲವೊಂದು ತಿಳಿಸಿದೆ. ಹಿತಾಸಕ್ತಿ ಸಂಘರ್ಷದ ಹಿನ್ನೆಲೆಯಲ್ಲಿ ಶ್ರೀನಿವಾಸನ್ ಬಿಸಿಸಿಐ ಚುನಾವಣೆಗೆ ನಿಲ್ಲದಂತೆ ಸುಪ್ರೀಂಕೋರ್ಟ್ ನಿಷೇಧ ವಿಧಿಸಿತ್ತು.  ಶ್ರೀನಿವಾಸನ್ ಐಪಿಎಲ್ ತಂಡದ ಮಾಲೀಕತ್ವ ಹೊಂದಿರುವುದರಿಂದ ವಾಣಿಜ್ಯ ಹಿತಾಸಕ್ತಿ ಇದ್ದು, ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಹೇಳಿತ್ತು. 

ವೆಬ್ದುನಿಯಾವನ್ನು ಓದಿ