ನವಜೋತ್ ಸಿಂಗ್ ಸಿದುಗೆ ರಕ್ತಹೆಪ್ಪುಗಟ್ಟುವಿಕೆ ನಿವಾರಣೆ ಚಿಕಿತ್ಸೆ

ಬುಧವಾರ, 7 ಅಕ್ಟೋಬರ್ 2015 (13:49 IST)
ಭಾರತದ ಮಾಜಿ ಕ್ರಿಕೆಟರ್ ನವಜೋತ್ ಸಿಂಗ್ ಸಿಧು ಅವರು  ದೆಹಲಿಯ ಆಸ್ಪತ್ರೆಯಲ್ಲಿ ಅಭಿದಮನಿ ರಕ್ತಹೆಪ್ಪುಗಟ್ಟುವಿಕೆ( ಡಿವಿಟಿ) ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.  ಡಿವಿಟಿಗೆ ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ, ಅದು ಜೀವಕ್ಕೆ ಅಪಾಯ ಉಂಟುಮಾಡುವ ಸ್ಥಿತಿಯಾಗಿದೆ. ಈಗ ನವಜೋತ್ ಸಿಂಗ್ ಸಿಧು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಹೇಳಿಕೆ ತಿಳಿಸಿದೆ.
 
ನವಜೋತ್ ಸಿಂಗ್ ಸಿಧು ಅವರನ್ನು ಇಂದ್ರಪ್ರಸ್ತಾ ಅಪೋಲೊ ಆಸ್ಪತ್ರೆಗೆ ಭಾನುವಾರ ಸಂಜೆ ಸೇರಿಸಲಾಗಿದ್ದು, ಸಿಧು ಅವರಿಗೆ ರಕ್ತ ಮೃದುಗೊಳಿಸುವ ಬ್ಲಡ್ ಥಿನ್ನರ್‌ಗಳನ್ನು ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದು, ಅವರ ಪರಿಸ್ಥಿತಿ ಈಗ ಸ್ಥಿರವಾಗಿದೆ ಎಂದು ಇಂದ್ರಪ್ರಸ್ಥಾ ಅಪೋಲೊ ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ. 
 
ಅಭಿದಮನಿಯಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಡಿವಿಟಿ ಉಂಟಾಗುತ್ತದೆ. ಇದು ಸಾಮಾನ್ಯ ರಕ್ತದ ಹರಿವಿಗೆ ಉಂಟುಮಾಡುತ್ತದೆ. ಇದರ ಲಕ್ಷಣಗಳಲ್ಲಿ ಕಾಲುಗಳಲ್ಲಿ ಊದಿಕೊಳ್ಳುವಿಕೆ, ನೋವು ಇರುತ್ತದೆ. 
 

ವೆಬ್ದುನಿಯಾವನ್ನು ಓದಿ