ಇಲ್ಲಿನ ಎಚ್ಪಿಸಿಎ ಸ್ಟೇಡಿಯಂನಲ್ಲಿ 8 ವಿಕೆಟ್ ಕಳೆದುಕೊಂಡು 142 ರನ್ ಗಳಿಸಿದ ನ್ಯೂಜಿಲೆಂಡ್ ಆಸ್ಟ್ರೇಲಿಯಾವನ್ನು 9 ವಿಕೆಟ್ಗೆ 134 ರನ್ಗಳಿಗೆ ಮೊಟಕುಗೊಳಿಸಿ ಗೆಲವು ಗಳಿಸಿತು. ಕಿವಿ ಇನ್ನಿಂಗ್ಸ್ ಹೈಲೈಟ್ ಓಪನರ್ ಮಾರ್ಟಿನ್ ಗುಪ್ಟಿಲ್ ಅವರ 27 ಎಸೆತಗಳ 39 ಬಿರುಸಿನ ರನ್.ತಮ್ಮ ಪ್ರಥಮ ಪಂದ್ಯದಲ್ಲಿ ಭಾರತವನ್ನು ಬಗ್ಗುಬಡಿದ ಬ್ಲಾಕ್ ಕ್ಯಾಪ್ಸ್ ಇನ್ನೊಂದು ಉತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಸೆಮಿಫೈನಲ್ಗೆ ದಾಪುಗಾಲು ಹಾಕಿದ್ದಾರೆ.
ಆದರೆ ಆಸೀಸ್ ಬ್ಯಾಟಿಂಗ್ ಆಕಸ್ಮಿಕ ತಿರುವು ತೆಗೆದುಕೊಂಡು ಬೇಗನೇ 66ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು ಒತ್ತಡದಲ್ಲಿ ಸಿಲುಕಿತು. ನಾಗ್ಪುರದಲ್ಲಿ ಭಾರತದ ಬ್ಯಾಟಿಂಗ್ ಲೈನ್ಅಪ್ ಅದುರಿಸಿದ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ನಲ್ಲಿ ಅಪಾಯಕಾರಿ ಡೇವಿಡ್ ವಾರ್ನರ್ ಡೀಪ್ ಮಿಡ್ವಿಕೆಟ್ನಲ್ಲಿ ಕ್ಯಾಚ್ ನೀಡಿ ಔಟಾದರು ಮತ್ತು ಸ್ಟೀವನ್ ಸ್ಮಿತ್ ಸ್ಟಂಪ್ ಔಟ್ ಆದರು.
ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಮಿಚೆಲ್ ಸ್ಟಾರ್ಕ್ ಐದನೇ ವಿಕೆಟ್ಗೆ 36 ರನ್ ಸೇರಿಸಿದರು. ಮ್ಯಾಕ್ಸ್ವೆಲ್ ಡೀಪ್ ಎಕ್ಸ್ಟ್ರಾ ಕವರ್ನಲ್ಲಿ ಕ್ಯಾಚಿತ್ತು ಔಟಾದರು. ಮಾರ್ಶ್ ಮತ್ತು ಆಶ್ಟನ್ ಅಗರ್ ಇಬ್ಬರೂ ತಲಾ ಒಂದು ಸಿಕ್ಸರ್ ಹೊಡೆದಾಗ ಆಟವು ಆಸೀಸ್ ಪರ ವಾಲಿತ್ತು. ಆದರೆ ಮಿಚೆಲ್ ಮೆಕ್ಲೆನಾಗನ್ ಮಾರ್ಶ್ ಮ್ತತು ಅಗರ್ ಅವರನ್ನು ಔಟ್ ಮಾಡಿದಾಗ ಆಸ್ಟ್ರೇಲಿಯಾಕ್ಕೆ ಅಂತಿಮ ಓವರಿನಲ್ಲಿ 19 ರನ್ ಗುರಿಯಿತ್ತು. ಆದರೆ ಇದು ತುಂಬಾ ಕಠಿಣವಾಗಿ ಕಂಡು ಆಸೀಸ್ ಸೋಲಪ್ಪಿದೆ.