ಮೆಲ್ಬರ್ನ್ ಮೈದಾನದ ಗಾತ್ರದಿಂದ ನ್ಯೂಜಿಲೆಂಡ್‌ಗೆ ಹೆಣಗಾಟ: ಹೇಡನ್

ಗುರುವಾರ, 26 ಮಾರ್ಚ್ 2015 (20:10 IST)
ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮ್ಯಾಥೀವ್ ಹೇಡನ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಮೆಲ್ಬರ್ನ್‌ನಲ್ಲಿ ನಡೆಯುವ ಫೈನಲ್ ಪಂದ್ಯದ ಬಗ್ಗೆ ಪ್ರತಿಕ್ರಿಯಿಸುತ್ತಾ, ಮೆಲ್ಬರ್ನ್ ಮೈದಾನದ ಗಾತ್ರದಿಂದಾಗಿ ನ್ಯೂಜಿಲೆಂಡ್ ತಂಡ ಹೆಣಗಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಬ್ಲಾಕ್ ಕ್ಯಾಪ್‌ಗಳು(ನ್ಯೂಜಿಲೆಂಡ್)  ಎಲ್ಲಾ ವಿಶ್ವಕಪ್ ಪಂದ್ಯಗಳನ್ನು ಸ್ವದೇಶದಲ್ಲಿ ಆಡಿದ್ದಾರೆ. ಈಗ ಅವರು ಮೆಲ್ಬರ್ನ್‌ ಮೈದಾನದಲ್ಲಿ ಫೈನಲ್ಸ್ ಆಡಲು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಬೇಕಾಗಿದೆ.

ನ್ಯೂಜಿಲೆಂಡ್ ಮೈದಾನಗಳಿಗೆ ಹೋಲಿಕೆ ಮಾಡಿದರೆ ಮೆಲ್ಬರ್ನ್ ದೊಡ್ಡ ಮೈದಾನವಾಗಿದೆ. ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌‌ಗಳು ಅನೇಕ ಬಾರಿ ಸಿಕ್ಸರುಗಳನ್ನು ಹೊಡೆದಿದ್ದಾರೆ. ಆದರೆ ಮೆಲ್ಬರ್ನ್ ಮೈದಾನದಲ್ಲಿ ಹೀಗೆ ಹೊಡೆಯಲು ಹೋದರೆ ಬೌಂಡರಿ ಗೆರೆಯ ಸಮೀಪ ಕ್ಯಾಚ್ ನೀಡಬೇಕಾಗುತ್ತದೆ ಎಂದು ಹೇಡನ್ ಹೇಳಿದ್ದಾರೆ.

 ಎಂಸಿಜಿಯಲ್ಲಿ ಸರಾಸರಿ ಪಂದ್ಯದಲ್ಲಿ 5 ಸಿಕ್ಸರ್‌ಗಳು ಮಾತ್ರ ಪಂದ್ಯಾವಳಿಯ ಸಂದರ್ಭದಲ್ಲಿ ಬಂದಿವೆ. ಆದರೆ ವೆಲ್ಲಿಂಗ್ಟನ್  ಮೈದಾನದಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ 30 ಸಿಕ್ಸರ್‌ಗಳು ಮತ್ತು ಎಡೆನ್‌ಪಾರ್ಕ್‌ನಲ್ಲಿ  16 ಸಿಕ್ಸರ್‌ಗಳು ದಾಖಲಾಗಿವೆ. ಅವರು ಚೆಂಡನ್ನು ಹೊಡೆಯುವ ರೀತಿಯನ್ನು ಬದಲಿಸಿಕೊಳ್ಳಬೇಕಿದೆ ಎಂದು ಹೇಡನ್ ಹೇಳಿದರು.

ವೆಬ್ದುನಿಯಾವನ್ನು ಓದಿ