ವಿಶ್ವಕಪ್ ಫೈನಲ್ಸ್ : ಆರಂಭದಲ್ಲೇ ನ್ಯೂಜಿಲೆಂಡ್‌ಗೆ ಆಘಾತ, 3 ವಿಕೆಟ್ ಪತನ

ಭಾನುವಾರ, 29 ಮಾರ್ಚ್ 2015 (11:15 IST)
ಮೆಲ್ಬರ್ನ್ :  ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಮಹಾಸಮರದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದ್ದು, ನ್ಯೂಜಿಲೆಂಡ್‌ನ ಮೂರು ವಿಕೆಟ್‌ಗಳನ್ನು ಉರುಳಿಸಿದ್ದು, ನ್ಯೂಜಿಲೆಂಡ್ ಆರಂಭಿಕ ಆಘಾತ ಅನುಭವಿಸಿದೆ.  ನ್ಯೂಜಿಲೆಂಡ್ ಬಲಾಢ್ಯ ಬ್ಯಾಟ್ಸ್‌ಮನ್  ಬ್ರೆಂಡನ್ ಮೆಕಲಮ್ ಖಾತೆ ತೆರೆಯದೇ 3 ಎಸೆತಗಳನ್ನು ಆಡಿ ಸ್ಟಾರ್ಕ್ ಬೌಲಿಂಗ್‌ನಲ್ಲಿ ಬೌಲ್ಡ್ ಔಟಾದರು. ಮಾರ್ಟಿನ್ ಗುಪ್ಟಿಲ್ 34 ಎಸೆತಗಳಲ್ಲಿ  15 ರನ್ ಮಾಡಿ ಮ್ಯಾಕ್ಸ್‌ವೆಲ್ ಎಸೆತದಲ್ಲಿ ಬೌಲ್ಡ್ ಆಗಿದ್ದಾರೆ.

ಅವರ ಸ್ಕೋರಿನಲ್ಲಿ 1 ಸಿಕ್ಸರ್ ಮತ್ತು ಒಂದು ಬೌಂಡರಿಯಿತ್ತು.  ಕೇನ್ ವಿಲಿಯಂಸನ್ ಜಾನ್ಸನ್ ಬೌಲಿಂಗ್‌ನಲ್ಲಿ ಅವರಿಗೇ ಕ್ಯಾಚಿತ್ತು ಔಟಾದರು.  ನ್ಯೂಜಿಲೆಂಡ್ 30.1 ಓವರುಗಳಲ್ಲಿ 122 ರನ್ ಗಳಿಸಿ ಆಡುತ್ತಿದೆ. ರೋಸ್ ಟೇಲರ್ 53 ಎಸೆತಗಳಲ್ಲಿ 30 ರನ್ ಮತ್ತು ಗ್ರಾಂಟ್ ಎಲಿಯಟ್ 58 ಎಸೆತಗಳಲ್ಲಿ 55 ರನ್‌ಗಳೊಂದಿಗೆ ಅಜೇಯರಾಗಿ ಆಡುತ್ತಿದ್ದಾರೆ.

  ಮೊದಲ ಬಾರಿಗೆ ವಿಶ್ವಕಪ್ ಇತಿಹಾಸದಲ್ಲಿ ಫೈನಲ್ ಪ್ರವೇಶಿಸಿರುವ ನ್ಯೂಜಿಲೆಂಡ್ ಟ್ರೋಫಿಯನ್ನು ಗೆಲ್ಲುವ ತವಕದಲ್ಲಿದೆ.  ನ್ಯೂಜಿಲೆಂಡ್ ಮೂರು ವಿಕೆಟ್ ಉರುಳಿದ ಬಳಿಕ ಎಚ್ಚರಿಕೆಯ ಆಟವನ್ನು ಆಡಲು ಆರಂಭಿಸಿದೆ.

ವೆಬ್ದುನಿಯಾವನ್ನು ಓದಿ