ಭಾರತ-ನ್ಯೂಜಿಲೆಂಡ್ ಏಕದಿನ: ಟೀಂ ಇಂಡಿಯಾಕ್ಕೆ 274 ಗೆಲ್ಲಲು ರನ್ ಗುರಿ
ಶನಿವಾರ, 8 ಫೆಬ್ರವರಿ 2020 (11:16 IST)
ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯವನ್ನು ಗೆಲ್ಲಲು ಟೀಂ ಇಂಡಿಯಾಗೆ ಕಿವೀಸ್ 274 ರನ್ ಗಳ ಗುರಿ ನಿಗದಿಪಡಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಆರಂಭಿಕರ ಉತ್ತಮ ಜತೆಯಾಟದ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಿದ್ದರಿಂದ ಬೃಹತ್ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಕೆಳ ಕ್ರಮಾಂಕದಲ್ಲಿ ರಾಸ್ ಟೇಲರ್ 73 ರನ್ ಗಳಿಸಿ ಗೌರವಯುತ ಮೊತ್ತ ದಾಖಲಿಸಲು ನೆರವಾದರು.
ಇದರಿಂದಾಗಿ ನಿಗದಿತ 50 ಓವರ್ ಗಳಲ್ಲಿ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 273 ರನ್ ಗಳಿಸಿತು. ಭಾರತದ ಪರ ಯಜುವೇಂದ್ರ ಚಾಹಲ್ 3, ಶ್ರಾದ್ಧೂಲ್ ಠಾಕೂರ್ 2 ವಿಕೆಟ್ ಮತ್ತು ರವೀಂದ್ರ ಜಡೇಜಾ 1 ವಿಕೆಟ್ ಕಬಳಿಸಿದರು.