ನ್ಯೂಜಿಲೆಂಡ್ ನ ಮ್ಯಾಚ್ ರೆಫರಿ ಜೆಫ್ ಕ್ರೊವ್ ಮಾಡಿದ ವಿಶಿಷ್ಟ ದಾಖಲೆಯಿದು

ಶುಕ್ರವಾರ, 27 ಜನವರಿ 2017 (09:27 IST)
ವೆಲ್ಲಿಂಗ್ಟನ್: ಕ್ರಿಕೆಟ್ ಮೈದಾನದಲ್ಲಿ ಆಡುವ ಆಟಗಾರರು ದಾಖಲೆ ನಿರ್ಮಿಸುವುದು ಸಹಜ. ಆದರೆ ನ್ಯೂಜಿಲೆಂಡ್ ಮೂಲದ ಜೆಫ್ ಕ್ರೊವ್ ಮ್ಯಾಚ್ ರೆಫರಿಯಾಗಿ ದಾಖಲೆ ನಿರ್ಮಿಸಿದ್ದಾರೆ. ಅಷ್ಟಕ್ಕೂ ಅವರು ಮಾಡಿದ ದಾಖಲೆಯೇನು ಗೊತ್ತಾ?
 

ಅತೀ ಹೆಚ್ಚು ಏಕದಿನ ಪಂದ್ಯಗಳಲ್ಲಿ ಭಾಗಿಯಾಗಿದ್ದು. ಅಂದರೆ ಅತೀ ಹೆಚ್ಚು ಏಕದಿನ ಪಂದ್ಯಗಳಿಗೆ ಮ್ಯಾಚ್ ರೆಫರಿಯಾಗಿ ಕಾರ್ಯ ನಿರ್ವಹಿಸಿದ್ದು. ಇದುವರೆಗೆ ಜೆಫ್ ಒಟ್ಟು 250 ಏಕದಿನ ಪಂದ್ಯಗಳಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಿ ದಾಖಲೆ ನಿರ್ಮಿಸಿದ್ದಾರೆ.

ನಿನ್ನೆ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಏಕದಿನ ಪಂದ್ಯದಲ್ಲಿ ಅವರು ಈ ದಾಖಲೆ ನಿರ್ಮಿಸಿದ್ದಾರೆ. ನ್ಯೂಜಿಲೆಂಡ್ ಪರ 39 ಟೆಸ್ಟ್ ಮತ್ತು 75 ಏಕದಿನ ಪಂದ್ಯವಾಡಿರುವ ಕ್ರೊವ್ ಈ ಸಾಧನೆ ಮಾಡಿದ ಮೂರನೇ ರೆಫರಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಇದಕ್ಕಿಂತ ಮೊದಲು ಶ್ರೀಲಂಕಾದ ರಂಜನ್ ಮದುಗಲೆ ಮತ್ತು ಇಂಗ್ಲೆಂಡ್ ಕ್ರಿಸ್ ಬ್ರಾಡ್ 250 ಏಕದಿನ ಪಂದ್ಯಗಳಲ್ಲಿ ರೆಫರಿಗಳಾದ ದಾಖಲೆ ಮಾಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ