ನಾಯಕತ್ವಕ್ಕೆ ರಾಜೀನಾಮೆ ಕೊಹ್ಲಿ ಸ್ವಯಂ ನಿರ್ಧಾರ, ಒತ್ತಡವಿರಲಿಲ್ಲ
ತಮ್ಮ ಮೇಲಾಗುತ್ತಿರುವ ಕೆಲಸದ ಒತ್ತಡ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೊಹ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಈ ವಿಚಾರದಲ್ಲಿ ಬಿಸಿಸಿಐ ಒತ್ತಡ ಹೇರಿತ್ತು ಎಂಬ ವರದಿಗಳೆಲ್ಲಾ ಸುಳ್ಳು ಎಂದು ಬಿಸಿಸಿಐ ಮೂಲಗಳೇ ಹೇಳಿವೆ.