ಧೋನಿ, ಕೊಹ್ಲಿ ನಡುವೆ ಯಾವುದೇ ಒಡಕಿಲ್ಲ: ಅನುರಾಗ್ ಠಾಕೂರ್

ಸೋಮವಾರ, 29 ಜೂನ್ 2015 (20:53 IST)
ಸೀಮಿತ ಓವರುಗಳ ನಾಯಕ ಧೋನಿ ಮತ್ತು ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ನಡುವೆ ಯಾವುದೇ ಒಡಕು ಉಂಟಾಗಿರುವುದನ್ನು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಮತ್ತು ಮುಖ್ಯ ಆಯ್ಕೆದಾರ ಸಂದೀಪ್ ಪಾಟೀಲ್ ಸೋಮವಾರ ತಳ್ಳಿಹಾಕಿದ್ದಾರೆ.  ಬಾಂಗ್ಲಾದೇಶದ ವಿರುದ್ಧ ಏಕದಿನ ಪಂದ್ಯದಲ್ಲಿ ಧೋನಿ ತೆಗೆದುಕೊಂಡ ನಿರ್ಧಾರಗಳನ್ನು ಕೊಹ್ಲಿ ಪ್ರಶ್ನಿಸಿದ ಬಳಿಕ ಧೋನಿ ಮತ್ತು ಕೊಹ್ಲಿ ನಡುವೆ ಬಿರುಕು ಉಂಟಾಗಿದೆಯೆಂಬ ವದಂತಿಗಳು ಹರಡಿವೆ.  ಆದರೆ ತಂಡವು ಒಡಕಿನ ಮನೆಯಲ್ಲ ಎಂದು ಪಾಟೀಲ್ ಹೇಳಿದರು. 
 
ಭಾರತ ತಂಡದ ಜೊತೆ ರೋಜರ್ ಬಿನ್ನಿ ಮತ್ತು ವಿಕ್ರಮ್ ರಾಥೋರ್ ಇದ್ದಿದ್ದು, ಟೀಂ ಮ್ಯಾನೇಜ್‌ಮೆಂಟ್ ಜೊತೆ ಸತತ ಸಂಪರ್ಕದಲ್ಲಿದ್ದರು. ಜನರಿಗೆ ಬೇಕಾದ ಹಾಗೆ ಬರೆಯುವುದು ಅವರಿದೇ ಬಿಟ್ಟಿದ್ದು ಎಂದು ಪಾಟೀಲ್ ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸುತ್ತಾ ನುಡಿದರು. 
 
ಕೊಹ್ಲಿ ಮತ್ತು ಧೋನಿ ಅವರ ಕಾಮೆಂಟ್‌ಗಳಿಂದ ಇಬ್ಬರ ನಡುವೆ ವಿರಸ ಉಂಟಾಗಿದೆಯೆಂದು ಪರಿಸ್ಥಿತಿಯನ್ನು ವ್ಯಾಖ್ಯಾನಿಸಲಾಗಿತ್ತು. ಆದರೆ ಜನರು ಪಂದ್ಯದ ನಂತರದ ಕಾಮೆಂಟ್‌ಗಳಿಗೆ ಹೆಚ್ಚು ಅರ್ಥ ಕಲ್ಪಿಸಬಾರದೆಂದು ಹೇಳಿದರು.
 
ಭಾರತದ ಕೋಚ್ ಆಯ್ಕೆ ಕುರಿತಂತೆ, ಠಾಕೂರ್ ಮಾತನಾಡುತ್ತಾ,  ಸಚಿನ್, ಸೌರವ್ ಮತ್ತು ಲಕ್ಷ್ಮಣ್ ಅವರನ್ನು ಒಳಗೊಂಡ ಅತಿ ಗಣ್ಯ ಸಲಹಾ ಸಮಿತಿಯು ಈ ವಿಷಯದ ಬಗ್ಗೆ ತೀರ್ಮಾನಿಸುತ್ತದೆ ಎಂದು ಹೇಳಿದರು.  ಮುಂದಿನ ಕೋಚ್‌ಗಾಗಿ ಕ್ರಿಕೆಟ್ ಸಲಹಾ ಸಮಿತಿಯು ಹೆಸರುಗಳನ್ನು ಪಟ್ಟಿ ಮಾಡುತ್ತಿದ್ದು, ಜುಲೈನಲ್ಲಿ ನಾವು ಭೇಟಿಯಾದ ಬಳಿಕ ಈ ವಿಷಯಗಳನ್ನು ಚರ್ಚಿಸುತ್ತೇವೆ ಎಂದು ನುಡಿದರು.
 

ವೆಬ್ದುನಿಯಾವನ್ನು ಓದಿ