ಭಾರತ ವಿಶ್ವಕಪ್ ಗೆಲ್ಲುವುದು ಅಷ್ಟೊಂದು ಸುಲಭವಲ್ಲ: ದ್ರಾವಿಡ್

ಶನಿವಾರ, 31 ಜನವರಿ 2015 (16:44 IST)
ಭಾರತಕ್ಕೆ ವಿಶ್ವ ಕಪ್ ಗೆಲ್ಲುವುದು ಅಷ್ಟೊಂದು ಸುಲಭವಲ್ಲ. ಕ್ವಾರ್ಟರ್ ಫೈನಲ್ ಮುಟ್ಟುವುದು ಕಷ್ಟವಾಗದು. ಆದರೆ ಅದಾದನಂತರ, ಯಾವುದೇ ತಂಡ ಮೂರು ಉತ್ತಮ ಆಟಗಳು ಮತ್ತು ಸ್ವಲ್ಪ ಮಟ್ಟಿನ ಅದೃಷ್ಟದಿಂದ ಗೆಲವು ಸಾಧ್ಯವಾಗುತ್ತದೆ ಎಂದು ರಾಹುಲ್ ದ್ರಾವಿಡ್ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಮಾತನಾಡುತ್ತಾ ಹೇಳಿದರು.

ಅನೇಕ ಕ್ರಿಕೆಟರ್‌ಗಳು ಮತ್ತು ಕ್ರೀಡಾಪಟುಗಳು ಸೇರಿದ್ದ ಸಭೆಯಲ್ಲಿ ಮಾತನಾಡಿದ ದ್ರಾವಿಡ್  ವಿರಾಟ್ ಕೊಹ್ಲಿ ಮತ್ತು ಧೋನಿ ನಾಕ್‌ಔಟ್ ಹಂತದಲ್ಲಿ ಉತ್ತಮವಾಗಿ ಆಡಿದರೆ ಭಾರತಕ್ಕೆ ವಿಶ್ವಕಪ್ ಉಳಿಸಿಕೊಳ್ಳುವುದು ಸಾಧ್ಯವಾಗುತ್ತದೆ ಎಂದು ದ್ರಾವಿಡ್ ಪ್ರತಿಪಾದಿಸಿದರು.

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಈ ಬಾರಿ ಉತ್ತಮವಾಗಿ ಆಡುತ್ತವೆಂದು ನಿರೀಕ್ಷಿಸಲಾಗಿದೆ ಎಂದು ಹೇಳಿದ ದ್ರಾವಿಡ್ ಬೌಲರ್‌ಗಳ ಬಗ್ಗೆ ತಮ್ಮ ಸಹಾನುಭೂತಿ ವ್ಯಕ್ತಪಡಿಸಿದರು. ನಿಯಮಗಳ ಬದಲಾವಣೆಯಿಂದ, ಬೌಲರುಗಳಿಗೆ ಕಷ್ಟವಾಗಿದೆ. ನನಗೆ ಇದಕ್ಕೆ ಮುಂಚೆ ಬೌಲರ್‌ಗಳ ಬಗ್ಗೆ ಸಹಾನುಭೂತಿ ಇರಲಿಲ್ಲ. ಆದರೆ ಈಗ ಆ ಭಾವನೆ ಉಕ್ಕುತ್ತಿದೆ ಎಂದು ದ್ರಾವಿಡ್ ಹೇಳಿದರು.

ವೆಬ್ದುನಿಯಾವನ್ನು ಓದಿ