ಟೆಸ್ಟ್‌ನಿಂದ ಟಿ 20 ಮಾದರಿಗೆ ಬದಲಾಗುವುದು ಸುಲಭವಲ್ಲ: ಅನಿಲ್ ಕುಂಬ್ಳೆ

ಶುಕ್ರವಾರ, 26 ಆಗಸ್ಟ್ 2016 (11:51 IST)
ಟೆಸ್ಟ್ ಕ್ರಿಕೆಟ್‌ನಿಂದ ಕಿರು ಮಾದರಿಯ ಆಟಕ್ಕೆ ಬದಲಾಗುವುದಕ್ಕೆ ಅಗತ್ಯ ಹೊಂದಾಣಿಕೆಗಳ ಬಗ್ಗೆ ಆಟಗಾರರು ಗಮನಹರಿಸಿದ್ದಾರೆ ಎಂದು ಭಾರತದ ಹೆಡ್ ಕೋಚ್ ಅನಿಲ್ ಕುಂಬ್ಳೆ ತಿಳಿಸಿದರು. ಆಗಸ್ಟ್ 27 ಮತ್ತು 28ರಂದು ವೆಸ್ಟ್ ಇಂಡೀಸ್ ವಿರುದ್ಧ 2 ಟಿ 20 ಪಂದ್ಯಗಳಿಗೆ ಮುಂಚೆ ಮಾಧ್ಯಮದ ಜತೆ ಕುಂಬ್ಳೆ ಮಾತನಾಡುತ್ತಾ ಹೇಳಿದರು.

ಟಿ 20 ಸ್ವರೂಪದ ಆಟದಲ್ಲಿ ಹಾಲಿ ವಿಶ್ವ ಚಾಂಪಿಯನ್ನರಾದ ವೆಸ್ಟ್ ಇಂಡೀಸ್ ತಂಡವನ್ನು ಉರುಳಿಸುವುದು ಕಠಿಣ ಕೆಲಸ ಎಂದೂ ಕುಂಬ್ಳೆ ಅಭಿಪ್ರಾಯಪಟ್ಟರು.
 
ಇದೊಂದು ಮನಸ್ಥಿತಿಯ ಬದಲಾವಣೆಯಾಗಿದ್ದು, ಟೆಸ್ಟ್ ಸರಣಿಯಿಂದ ಟಿ 20 ವಿಧಾನಕ್ಕೆ ನಿಮ್ಮ ಗಮನ ಬದಲಾಯಿಸುವುದು ಅಷ್ಟು ಸುಲಭವಲ್ಲ ಎಂದು ಕುಂಬ್ಳೆ ಹೇಳಿದರು. ಬೌಲರುಗಳು ಮತ್ತು ಬ್ಯಾಟ್ಸ್‌ಮನ್ ಇಬ್ಬರೂ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕು. ಆದರೆ ಅದು ಅಷ್ಟು ಸುಲಭವಲ್ಲ. ಆದರೆ ನಾವೆಲ್ಲಾ ವೃತ್ತಿಪರರಾಗಿದ್ದು, ವಿಂಡೀಸ್ ಸಾಕಷ್ಟು ಟಿ 20 ಕ್ರಿಕೆಟ್ ಆಡಿ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಕುಂಬ್ಳೆ ತಿಳಿಸಿದರು. 
 
ಭಾರತ ತಂಡ ಟಿ 20 ಮಾದರಿ ಆಟದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದು, ಗೆಲುವಿನ ಗತಿಯನ್ನು ಮುಂದುವರಿಸಲು ನೋಡಿದೆ ಎಂದು ಕುಂಬ್ಳೆ ಹೇಳಿದರು. ಐಸಿಸಿ ಟಿ 20 ಶ್ರೇಯಾಂಕದಲ್ಲಿ ಪ್ರಸಕ್ತ 2ನೇ ಸ್ಥಾನದಲ್ಲಿದ್ದು, ನ್ಯೂಜಿಲೆಂಡ್‌ಗಿಂತ 4 ಪಾಯಿಂಟ್ ಕೆಳಗಿದೆ. ಆದಾಗ್ಯೂ ಮುಖ್ಯ ಆದ್ಯತೆ ಉತ್ತಮ ಕ್ರಿಕೆಟ್ ಆಡುವುದಾಗಿದ್ದು, ಶ್ರೇಯಾಂಕದ ಕುರಿತು ಯೋಚಿಸುವುದಲ್ಲ ಎಂದರು.
 

ವೆಬ್ದುನಿಯಾವನ್ನು ಓದಿ