ಅನುಷ್ಕಾ ಶರ್ಮಾಳನ್ನು ಟೀಕಿಸುವವರಿಗೆ ನಾಚಿಕೆಯಾಗಬೇಕು: ವಿರಾಟ್ ಕೊಹ್ಲಿ

ಶುಕ್ರವಾರ, 10 ಏಪ್ರಿಲ್ 2015 (16:24 IST)
ಐಸಿಸಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಕಳಪೆ ಪ್ರದರ್ಶನ ನೀಡುವುದಕ್ಕೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕಾರಣಳೆಂದು ಟೀಕಿಸುವವರಿಗೆ ನಾಚಿಕೆಯಾಗಬೇಕು. ಕಳೆದ ಐದು ವರ್ಷಗಳಲ್ಲಿ ನಾನು ಪಂದ್ಯಗಳನ್ನು ಗೆದ್ದಷ್ಟು ಯಾರು ಗೆದ್ದಿಲ್ಲ ಎನ್ನುವ ಅರಿವಿರಬೇಕು ಎಂದು ಟೀಂ ಇಂಡಿಯಾ ತಂಡದ ಉಪನಾಕ ವಿರಾಟ್ ಕೊಹ್ಲಿ ಗುಡುಗಿದ್ದಾರೆ.

ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಸೋಲನುಭವಿಸಿ ಅನುಷ್ಕಾಳೊಂದಿಗೆ ಕೈ  ಕೈ ಹಿಡಿದು ತವರಿಗೆ ಮರಳಿದ ನಂತರ ಮೊದಲ ಬಾರಿಗೆ ವಿರಾಟ್ ಮೌನ ಮುರಿದಿದ್ದಾರೆ. ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ವಿರಾಟ್-ಕೊಹ್ಲಿ ಬಗ್ಗೆ ವ್ಯಾಪಕ ಟೀಕೆಗಳು ಪ್ರಕಟವಾಗಿದ್ದವು.

ವಿಶ್ವಕಪ್‌ನಿಂದ ನಿರ್ಗಮಿಸಿರುವುದಕ್ಕೆ ಬೇರೆಯವರಂತೆ ನನಗೂ ತುಂಬಾ ನೋವಾಗಿದೆ. ಆದರೆ, ನಮ್ಮ ಸೋಲಿಗೆ ಅನುಷ್ಕಾ ಶರ್ಮಾ ಕಾರಣಳೆಂದು ಹೇಳುವವರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ.

ವೈಯಕ್ತಿಕವಾಗಿ ನನಗೆ ತುಂಬಾ ನಿರಾಸೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ತಂಡ ಹಲವಾರು ಬಾರಿ ಗೆಲ್ಲಲು ನೆರವಾಗಿದ್ದೇನೆ. ತಂಡದ ಇತರ ಆಟಗಾರರಿಗಿಂತ ನಾನು ಉತ್ತಮ ಪ್ರದರ್ಶನ ನೀಡಿರುವುದನ್ನು ದಾಖಲೆಗಳೇ ತಿಳಿಸುತ್ತವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ