ಟಿ20 ವಿಶ್ವಕಪ್ ಆಡುವ ವಿದೇಶೀ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ ಬೆನ್ನಲ್ಲೇ ಅಪಸ್ವರ

Krishnaveni K

ಭಾನುವಾರ, 21 ಏಪ್ರಿಲ್ 2024 (15:04 IST)
ಬೆಂಗಳೂರು: ಈ ಬಾರಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎರಡು ವಿದೇಶೀ ತಂಡಗಳಿಗೆ ಕನ್ನಡದ ಹೆಮ್ಮೆಯ ನಂದಿನಿ ಸಂಸ್ಥೆ ಪ್ರಾಯೋಜಕತ್ವ ನೀಡಲಿದೆ ಎಂಬ ಸುದ್ದಿ ಬಂದಿದೆ. ಇದರ ಬೆನ್ನಲ್ಲೇ ಅಪಸ್ವರವೂ ಕೇಳಿಬಂದಿದೆ.

ಟಿ20 ವಿಶ್ವಕಪ್ ಆಡಲಿರುವ ಸ್ಕಾಟ್ ಲ್ಯಾಂಡ್ ಮತ್ತು ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ಕರ್ನಾಟಕದ ನಂದಿನಿ ಸಂಸ್ಥೆ ಪ್ರಾಯೋಜಕತ್ವ ನೀಡಲಿದೆ. ಆದರೆ ಇದರ ಬೆನ್ನಲ್ಲೇ ಕೆಲವರು ವಿದೇಶೀ ತಂಡಗಳಿಗೆ ಯಾಕೆ ನಮ್ಮ ರಾಜ್ಯದ ರೈತರ ಹಣ, ಶ್ರಮ ವ್ಯಯಿಸಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈಗ ನಂದಿನಿ ವಾರ್ ಜೋರಾಗಿ ಸದ್ದು ಮಾಡುತ್ತಿದೆ. ಉದ್ಯಮಿ ಮೋಹನ್ ದಾಸ್ ಪೈ ಎಂಬವರು ನಂದಿನಿ ನಮ್ಮ ಕರ್ನಾಟಕದ ಉತ್ಪನ್ನ. ಇದರಲ್ಲಿರುವುದು ನಮ್ಮ ರೈತರ, ನಮ್ಮ ಗ್ರಾಹಕರ ಹಣ. ಈ ಹಣ ಮೊದಲು ನಮ್ಮ ದೇಶದವರಿಗೆ, ನಮ್ಮ ಕನ್ನಡಿಗರಿಗೆ ಸೇರಬೇಕು. ಅದು ಬಿಟ್ಟು ವಿದೇಶೀ ತಂಡಕ್ಕೆ ಪ್ರಾಯೋಜಕತ್ವಕ್ಕಾಗಿ ಹಣ ವ್ಯಯಿಸುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದರು.

ಇದರ ಬೆನ್ನಲ್ಲೇ ಈಗ ಎಕ್ಸ್ ಪುಟದಲ್ಲಿ ನಂದಿನಿ ಟ್ರೆಂಡ್ ಜೋರಾಗಿದೆ. ಕೆಲವರು ನಂದಿನಿ ವಿದೇಶೀ ತಂಡಕ್ಕೆ ಪ್ರಾಯೋಜಕತ್ವ ನೀಡುವ ಬದಲು ಮೊದಲು ನಮ್ಮ ದೇಶದ ಕ್ರೀಡಾಳುಗಳಿಗೆ, ನಮ್ಮ ದೇಶದ ಬಡವರಿಗೆ ಪ್ರಾಯೋಜಕತ್ವ, ಸಹಾಯ ಮಾಡಲಿ ಎಂದರೆ ಮತ್ತೆ ಕೆಲವರು ನಮ್ಮ ನಂದಿನಿ ಬ್ರ್ಯಾಂಡ್ ಈ ಮೂಲಕ ವಿದೇಶದವರೆಗೂ ತಲುಪಿದರೆ ನಮಗೇ ಲಾಭ ಎಂದು ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ