ಉಳಿದ ಬ್ಯಾಟ್ಸ್‌ಮನ್‌ಗಳಿಗೆ ಸಿಗದ ಅವಕಾಶ: ಧೋನಿಗೆ ಕಳವಳ

ಸೋಮವಾರ, 13 ಜೂನ್ 2016 (20:03 IST)
ಜಿಂಬಾಬ್ವೆ ವಿರುದ್ಧ ಏಕ ದಿನ ಸರಣಿಯಲ್ಲಿ ಜಿಂಬಾಬ್ವೆಯನ್ನು ವೈಟ್ ವಾಷ್ ಮಾಡುವ ಹಾದಿಯಲ್ಲಿ ಭಾರತವಿದ್ದು, ತಮ್ಮ ಬಹುತೇಕ ಬ್ಯಾಟ್ಸ್‌ಮನ್‌ಗಳಿಗೆ ಪ್ರವಾಸದಲ್ಲಿ ಅವಕಾಶ ಸಿಗದಿರುವ ಕುರಿತು ಧೋನಿ ಆತಂಕಿತರಾಗಿದ್ದಾರೆ. ಇಲ್ಲಿಯರೆಗೆ ನಮ್ಮ ಮೂರು ಅಗ್ರ ಬ್ಯಾಟ್ಸ್‌ಮನ್‌ಗಳಿಗೆ ಮಾತ್ರ ಆಡುವ ಅವಕಾಶ ಸಿಕ್ಕಿದೆ. ಆದ್ದರಿಂದ ಬ್ಯಾಟಿಂಗ್ ವಿಭಾಗದಲ್ಲಿ ನಾವು ಬದಲಾವಣೆ ಮಾಡಲು ಬಯಸಿದ್ದೇವೆ ಎಂದು ಧೋನಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಹೇಳಿದರು. 
 
ಕೊನೆಯ ಏಕ ದಿನ ಪಂದ್ಯಕ್ಕೆ ಮತ್ತು ಮೂರು ಟಿ 20 ಪಂದ್ಯಗಳಿಗೆ ತಂಡದ ಸಂಯೋಜನೆಯಲ್ಲಿ ಬದಲಾವಣೆ ಕುರಿತು ಮಾತನಾಡುತ್ತಾ, ಸಂಜಯ್ ಬಂಗಾರ್ ಜತೆ ನಾವು ಮುಂದಿನ ಆಟದಲ್ಲಿ ಬದಲಾವಣೆ ಕುರಿತು ಚರ್ಚಿಸುತ್ತೇವೆ. ಕೇವಲ ಒಂದು ಪಂದ್ಯದಲ್ಲಿ  ಅನೇಕ ಆಟಗಾರರ ಪ್ರದರ್ಶನವನ್ನು ಅಳೆಯಬೇಕಿದೆ. ಟಿ 20 ತಂಡದಲ್ಲಿ ಯಾರು ಫಿಟ್ ಆಗುತ್ತಾರೆಂದು ನೋಡಿ, ಒಬ್ಬ ಬೌಲರಿಗೆ ವಿಶ್ರಾಂತಿ ನೀಡುತ್ತೇವೆ ಎಂದು ಧೋನಿ ಹೇಳಿದರು. 
 
 ನಮ್ಮ ಬೌಲರುಗಳು ಜಿಂಬಾಬ್ವೆ ತಂಡವನ್ನು ನಿಯಂತ್ರಿಸಲು ಉತ್ತಮ ಬೌಲಿಂಗ್ ಮಾಡಿದರು. ಅವರು 200 ದಾಟುತ್ತಾರೆಂದು ನಾನು ಭಾವಿಸಿದ್ದೆ. ಆದರೆ ನಮ್ಮ ಸ್ಪಿನ್ನರುಗಳು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು ಎಂದು ಧೋನಿ ಪ್ರತಿಕ್ರಿಯಿಸಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ