ಭಾರತದ ಜೊತೆ ಕ್ರಿಕೆಟ್ ಸರಣಿ ಆಡಲು ಪಾಕ್ ಶತಪ್ರಯತ್ನ
ಕೆಲವು ದಿನಗಳ ಮೊದಲು ಪಾಕ್ ಕ್ರಿಕೆಟ್ ಮಂಡಳಿ ಭಾರತ-ಪಾಕ್ ಸೇರಿದಂತೆ ನಾಲ್ಕು ರಾಷ್ಟ್ರಗಳ ಕ್ರಿಕೆಟ್ ಸರಣಿ ಆಡುವ ಪ್ರಸ್ತಾಪವನ್ನು ಬಿಸಿಸಿಐ ಕ್ರಿಕೆಟ್ ಕಾರ್ಯದರ್ಶಿ ಜಯ್ ಶಾ ಮುಂದಿಟ್ಟಿತ್ತು. ಆದರೆ ಜಯ್ ಶಾ ಈ ಆಹ್ವಾನವನ್ನು ತಿರಸ್ಕರಿಸಿದ್ದರು.
ಆದರೆ ಪಾಕ್ ಇಷ್ಟಕ್ಕೇ ಸುಮ್ಮನಾಗಿಲ್ಲ. ಮಾರ್ಚ್ 19 ರಂದು ದುಬೈನಲ್ಲಿ ನಡೆಯಲಿರುವ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ ಜೊತೆ ಕ್ರಿಕೆಟ್ ಸರಣಿ ಆಡುವ ಬಗ್ಗೆ ಚರ್ಚಿಸುವುದಾಗಿ ಪಾಕ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ ಹೇಳಿದ್ದಾರೆ. ಕ್ರಿಕೆಟ್ ನಲ್ಲಿ ರಾಜಕೀಯ ಬೆರೆಸಬಾರದು. ಅಭಿಮಾನಿಗಳಿಗೆ ಭಾರತ-ಪಾಕ್ ನಡುವಿನ ರೋಚಕ ಸರಣಿಯಿಂದ ವಂಚಿತರಾಗಿಸುವುದು ತಪ್ಪು ಎಂದು ರಮೀಜ್ ಹೇಳಿಕೊಂಡಿದ್ದಾರೆ.