ಕೊಹ್ಲಿ ಹೇಳಿದರೂ ಬಿಡಲಿಲ್ಲ! ಮೈದಾನಕ್ಕೆ ನುಗ್ಗಿದ ಅಭಿಮಾನಿಗಳ ಮೇಲೆ ಎಫ್ ಐಆರ್

ಮಂಗಳವಾರ, 15 ಮಾರ್ಚ್ 2022 (09:40 IST)
ಬೆಂಗಳೂರು: ಶ್ರೀಲಂಕಾ ವಿರುದ್ಧ ಚಿನ್ನಸ್ವಾಮಿ ಅಂಗಣದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ವೇಳೆ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ಸೆಲ್ಫೀ ತೆಗೆಯಲು ಮೈದಾನಕ್ಕೆ ನುಗ್ಗಿದ ಅಭಿಮಾನಿಗಳ ಮೇಲೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

ಪಂದ್ಯದ ನಡುವೆ ಸೆಲ್ಫೀ ತೆಗೆಯಲು ನುಗ್ಗಿದ್ದ ಅಭಿಮಾನಿಗಲ್ಲಿ ಓರ್ವ ಬೆಂಗಳೂರಿಗ ಮತ್ತು ಇನ್ನೊಬ್ಬ ಬೆಳಗಾವಿ ಮೂಲದ ವ್ಯಕ್ತಿ ಇದ್ದರು. ಇಬ್ಬರನ್ನು ಬಂಧಿಸಿದ್ದ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

ಮೈದಾನಕ್ಕೆ ಅಭಿಮಾನಿಗಳನ್ನು ಹೊರ ಕಳುಹಿಸಲು ಬಂದಾಗ ಕೊಹ್ಲಿ ಏನೂ ಮಾಡದಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಹಾಗಿದ್ದರೂ ಅಭಿಮಾನಿಗಳು ಇಂತಹ ವರ್ತನೆ ಪದೇ ಪದೇ ಮಾಡದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ