ಪಾಕಿಸ್ತಾನ ಕ್ರಿಕೆಟ್ ಕಾಮೆಂಟೇಟರ್ ಮಾಡಲಿರುವ ಸಿನಿಮಾಕ್ಕೆ ಭಾರತೀಯ ನಟ ಸಂಜಯ್ ದತ್ ಹೀರೋ!

ಶನಿವಾರ, 4 ಫೆಬ್ರವರಿ 2017 (09:57 IST)
ಕರಾಚಿ: ಸಿನಿಮಾ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಬಿಡಿಸಲಾರದ ನಂಟಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಪಾಕಿಸ್ತಾನ ಖ್ಯಾತ ಕಾಮೆಂಟೇಟರ್ ರಮೀಜ್ ರಾಜಾ ಒಂದು ಸಿನಿಮಾ ನಿರ್ಮಿಸಲಿದ್ದು, ಅದಕ್ಕೆ ಬಾಲಿವುಡ್ ನ ಸಂಜಯ್ ದತ್ ಹೀರೋ!
 

ಇತ್ತೀಚೆಗಷ್ಟೇ ರಮೀಜ್  ಆಸ್ಟ್ರೇಲಿಯಾ ಓಪನ್ ಫೈನಲ್ ಪಂದ್ಯವನ್ನು ಪ್ರಸಾರ ಮಾಡದ  ತನ್ನ ದೇಶ ಕ್ರೀಡಾ ಸ್ನೇಹಿಯಲ್ಲದ ರಾಷ್ಟ್ರ ಎಂದು ಜರೆದು ಸುದ್ದಿಯಾಗಿದ್ದರು. ಇದೀಗ ಸಿನಿಮಾ ನಿರ್ಮಾಣದ ಮೂಲಕ ಸುದ್ದಿಯಲ್ಲಿದ್ದಾರೆ.

ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್ ತಮ್ಮ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಅವರೇ ಖಚಿತಪಡಿಸಿದ್ದಾರೆ. ಅಲ್ಲದೆ ಮಹಿರಾ ಖಾನ್, ಕತ್ರಿನಾ ಕೈಫ್ ಅವರನ್ನೂ ಸಿನಿಮಾಕ್ಕೆ ಕರೆತರಬೇಕೆಂಬ ಆಸೆ ರಮೀಜ್ ಗಿದೆಯಂತೆ. ಯಾರೆಲ್ಲಾ ಭಾರತೀಯ ನಟಿಯರು ಪಾಕ್ ಕಾಮೆಂಟೇಟರ್ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಶೀಘ್ರದಲ್ಲೇ ತಿಳಿಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ