ಎಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ ಅರ್ಧಶತಕ ಗಳಿಸಿದ ಟೀಂ ಇಂಡಿಯಾ ಆರಂಭಿಕ ಯಶಸ್ವಿ ಜೈಸ್ವಾಲ್ ಮತ್ತೊಮ್ಮೆ ತಾವೊಬ್ಬ ಅದ್ಭುತ ಟೆಸ್ಟ್ ಬ್ಯಾಟಿಗ ಎಂದು ನಿರೂಪಿಸಿದ್ದಾರೆ.
ಒಟ್ಟು 21 ಟೆಸ್ಟ್ ಪಂದ್ಯಗಳಲ್ಲಿ ಯಶಸ್ವಿ ಜೈಸ್ವಾಲ್ 16 ಬಾರಿ 50 ಪ್ಲಸ್ ರನ್ ಗಳಿಸಿರುವುದು ಅವರ ಅದ್ಭುತ ಬ್ಯಾಟಿಂಗ್ ಗೆ ಸಾಕ್ಷಿಯಾಗಿದೆ. ಇಂದಿನ ಪಂದ್ಯದಲ್ಲಿ ಅವರು 87 ರನ್ ಗಳಿಸಿ ಔಟಾದರು. ಅವರ ಬ್ಯಾಟಿಂಗ್ ನಿಂದಾಗಿ ಕೆಎಲ್ ರಾಹುಲ್ ರನ್ನು ಟೀಂ ಇಂಡಿಯಾ ಬೇಗನೇ ಕಳೆದುಕೊಂಡರೂ ಚೇತರಿಕೆಯ ಹಾದಿಯಲ್ಲಿದೆ.
ಟಾಸ್ ಸೋತ ಟೀಂ ಇಂಡಿಯಾ ಇಂದು ಮೊದಲು ಬ್ಯಾಟಿಂಗ್ ಗಿಳಿಸಲ್ಪಟ್ಟಿತು. ಆದರೆ ಆರಂಭದಲ್ಲೇ ಕೇವಲ 2 ರನ್ ಗಳಿಸಿ ಕೆಎಲ್ ರಾಹುಲ್ ನಿರ್ಗಮಿಸಿದರು. ನಂತರ ಬಂದ ಕರುಣ್ ನಾಯರ್ ಗೆ ಜೊತೆಯಾದ ಯಶಸ್ವಿ ಅರ್ಧಶತಕದ ಜೊತೆಯಾಟವಾಡಿದರು. ಕರುಣ್ 31 ರನ್ ಗಳಿಸಿ ಔಟಾದರು. ಇಂದು ಜೈಸ್ವಾಲ್ ಮತ್ತೊಮ್ಮೆ ಶತಕ ಗಳಿಸುವ ನಿರೀಕ್ಷೆ ಹುಟ್ಟಿಸಿದರಾದರೂ ಕೊನೆಗೆ ಬೆನ್ ಸ್ಟಾಕ್ ಬೌಲಿಂಗ್ ನಲ್ಲಿ ಔಟಾಗಿ ನಿರಾಸೆ ಅನುಭವಿಸಿದರು.
ಇದೀಗ ಭಾರತ 3 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ. ಭಾರತದ ಪರ ನಾಯಕ್ ಶುಬ್ಮನ ಗಿಲ್ 42, ರಿಷಭ್ ಪಂತ್ 14 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇಂಗ್ಲೆಂಡ್ ಪರ ಕಾರ್ಸೆ, ಕ್ರಿಸ್ ವೋಕ್ಸ್ ಮತ್ತು ಬೆನ್ ಸ್ಟೋಕ್ಸ್ ತಲಾ 1 ವಿಕೆಟ್ ಕಬಳಿಸಿದ್ದಾರೆ.