ಪಾಕಿಸ್ತಾನದ ಈ ಇಬ್ಬರು ವೇಗಿಗಳಿಗೆ ಟೀಂ ಇಂಡಿಯಾದ ಈ ಇಬ್ಬರು ಬ್ಯಾಟ್ಸ್ ಮನ್ ಗಳೇ ಟಾರ್ಗೆಟ್!

ಶನಿವಾರ, 15 ಜೂನ್ 2019 (09:36 IST)
ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರ ಮುಂದಿನ ಪಂದ್ಯದಲ್ಲಿ ಭಾರತ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.  ಈ ಜಿದ್ದಾ ಜಿದ್ದಿನ ಹೋರಾಟಕ್ಕೆ ಈಗ ಉಭಯ ತಂಡದ ಆಟಗಾರರು ಸಕಲ ತಯಾರಿ ನಡೆಸುತ್ತಿದ್ದಾರೆ.


ಈ ನಡುವೆ  ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಭಾರತಕ್ಕೆ ಎದುರಾಳಿಗಳ ಬಗ್ಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ. ಪಾಕ್ ನ ಇಬ್ಬರು ವೇಗಿಗಳು ಭಾರತ ಯಾವ ಸ್ಟಾರ್ ಆಟಗಾರರನ್ನು ಟಾರ್ಗೆಟ್ ಮಾಡುತ್ತಾರೆ ಎಂದು ಸಚಿನ್ ಭವಿಷ್ಯ ನುಡಿದಿದ್ದಾರೆ.

ಸಚಿನ್ ಪ್ರಕಾರ ಪಾಕ್ ವೇಗಿಗಳಾದ ಮೊಹಮ್ಮದ್ ಅಮೀರ್ ಮತ್ತು ವಹಾಬ್ ರಿಯಾಜ್ ಭಾರತದ ನಾಯಕ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾರನ್ನು ಹಣಿಯಲು ತಂತ್ರ ರೂಪಿಸಿರಬಹುದಂತೆ.

‘ರೋಹಿತ್ ಮತ್ತು ಕೊಹ್ಲಿ ಭಾರತ ತಂಡದಲ್ಲಿ ಅನುಭವಿ ಆಟಗಾರರು. ಪಾಕ್ ವೇಗಿಗಳು ಇವರನ್ನೇ ಟಾರ್ಗೆಟ್ ಮಾಡ್ತಾರೆ. ಅದರಲ್ಲೂ ಅಮೀರ್ ಮತ್ತು ವಹಾಬ್ ಖಂಡಿತವಾಗಿಯೂ ಇಬ್ಬರೂ ಆಟಗಾರರಿಗೆ ಬಲೆ ಹಣಿಯುತ್ತಾರೆ. ಹೀಗಾಗಿ ಕೊಹ್ಲಿ ಮತ್ತು ರೋಹಿತ್ ಸುದೀರ್ಘ ಇನಿಂಗ್ಸ್ ಆಡಿ ಇತರ ಬ್ಯಾಟ್ಸ್ ಮನ್ ಗಳಿಗೆ ಹಾದಿ ಸುಗಮಗೊಳಿಸಲು ತಯಾರಿ ನಡೆಸಬೇಕು’ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ