ಸ್ಟೀವ್ ಡೇವಿಸ್‌ನಿಂದ ಪಾಕ್ ಬಲಿಪಶು: ಸಯೀದ್ ಅಜ್ಮಲ್

ಸೋಮವಾರ, 16 ಫೆಬ್ರವರಿ 2015 (18:22 IST)
ಐಸಿಸಿ ಅಂಪೇರ್ ಸ್ಟೀವ್ ಡೇವಿಸ್ ಪಾಕಿಸ್ತಾನವನ್ನು ಬಲಿಪಶು ಮಾಡಿದ್ದಾರೆ ಎಂದು ಪಾಕಿಸ್ತಾನ ಆಫ್‌ಸ್ಪಿನ್ನರ್  ಸಯೀದ್ ಅಜ್ಮಲ್  ಆರೋಪಿಸಿದ್ದಾರೆ. ಭಾರತ ವಿರುದ್ಧ ಅಡಿಲೇಡ್‌ನಲ್ಲಿ ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಉಮರ್ ಅಕ್ಮಲ್‌ ಬ್ಯಾಟಿಂಗ್‌ನಲ್ಲಿ  ಧೋನಿ ಹಿಡಿದ ಕ್ಯಾಚ್‌ಗೆ ಅಂಪೈರ್ ತೀರ್ಪು ಪುನರ್ಪರಿಶೀಲನೆಯಲ್ಲಿ  ಔಟ್ ಎಂದು  ಥರ್ಡ್ ಅಂಪೇರ್ ಸ್ಟೀವ್ ಡೇವಿಸ್ ತೀರ್ಪು ನೀಡಿದ್ದರು.
 
ನಾನು ಬೌಲ್ ಮಾಡಿದಾಗ ಸ್ಟೀವ್ ಡೇವಿಸ್ ಯಾವುದೇ ಅಪೀಲು ಎತ್ತಿಹಿಡಿದಿರಲಿಲ್ಲ. ಅವರು ಅಂಪೈರ್ ಆಗಿದ್ದಾಗ ನಾನು ವಿಕೆಟ್ ಪಡೆಯಲು ಅಂಪೇರ್ ತೀರ್ಪು ಪುನರ್ಪರಿಶೀಲನೆಗೆ ಕೇಳುತ್ತಿದ್ದೆ ಎಂದು ಅಜ್ಮಲ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದರು.
 
ಉಮರ್ ಅಕ್ಮಲ್ ಅವರ ಔಟನ್ನು ಪಾಕಿಸ್ತಾನದ ವಿರುದ್ಧ ಒಳಸಂಚು ಎಂಬಂತೆ ಚಾನೆಲ್ ಬಿಂಬಿಸಿತು. ನವಾಜ್ ಹಾಗೂ ಇಮ್ರಾನ್ ನಜೀರ್ ಕೂಡ  ಅಜ್ಮಲ್ ವಾದಗಳನ್ನು ಬೆಂಬಲಿಸಿದರು.
 
ಲಾಹೋರ್‌ನಲ್ಲಿ ಲಂಕಾ ತಂಡದ ಮೇಲೆ ಉಗ್ರಗಾಮಿಗಳ ದಾಳಿ ಬಳಿಕ ಡೇವಿಸ್ ಪಾಕಿಸ್ತಾನದ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ ಎಂದು ಹೇಳಿದರು.
 ಉಮರ್ ಔಟಾಗಿದ್ದು ಪಂದ್ಯದ ಮೇಲೆ ದೊಡ್ಡ ಪರಿಣಾಮ ಬೀರಿತು.ಸ್ನಿಕೋಮೀಟರ್ ಯಾವುದನ್ನೂ ತೋರಿಸದಿದ್ದರೂ, ಚೆಂಡು ಬ್ಯಾಟಿಗೆ ತಾಗಿದ ಯಾವುದೇ ಶಬ್ದ ಕೇಳಿರದಿದ್ದರೂ ರೆಫರಲ್ ಆಧಾರದ ಮೇಲೆ ಉಮರ್‌ಗೆ ಔಟ್ ನೀಡಿದ್ದು ಏಕೆ ಎಂದು ಅವರು ಪ್ರಶ್ನಿಸಿದರು.

ಫೀಲ್ಡ್ ಅಂಪೈರ್ ಅವರ ಮೂಲ ನಾಟೌಟ್ ತೀರ್ಪನ್ನು ಎತ್ತಿಹಿಡಿಯಲಿಲ್ಲ ಎಂದು ಅಜ್ಮಲ್ ಪ್ರಶ್ಮಿಸಿದರು. ರೆಫೆರಲ್ ಪುನರ್ಪಶೀಲನೆಗೆ ಬಳಸುವ ತಂತ್ರಜ್ಞಾನದ ವ್ಯವಸ್ಥೆ ತಮಗೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು

ವೆಬ್ದುನಿಯಾವನ್ನು ಓದಿ