ವಿರಾಟ್ ಕೊಹ್ಲಿಗೆ ಟಾಂಗ್ ನೀಡಿದ ಪಾಕಿಸ್ತಾನ ಬೌಲರ್

ಭಾನುವಾರ, 28 ಮೇ 2017 (13:34 IST)
ಚಾಂಪಿಯನ್ಸ್ ಟ್ರೋಫಿ ಆರಂಬಕ್ಕೆ ಮೂರು ದಿನ ಮಾತ್ರ ಬಾಕಿ ಉಳಿದಿದೆ. ಜೂನ್ 4ಕ್ಕೆ ಬಿಗ್ರೂಪ್`ನಲ್ಲರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಮಧ್ಯೆ ಪಾಕಿಸ್ತಾನ ಬೌಲರ್ ಜುನೈದ್ ಖಾನ್ ಭಾರತ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಟಾಂಗ್ ನೀಡಿದ್ದಾನೆ.
 

`ನಾನು ಮತ್ತು ವಿರಾಟ್ ಕೊಹ್ಲಿ ಮುಖಾಮುಖಿಯಾದ 4 ಪಂದ್ಯಗಳ ಪೈಕಿ ಮೂರರಲ್ಲಿ ವಿರಾಟ್ ಕೊಹ್ಲಿಯನ್ನ ಔಟ್ ಮಾಡಿದ್ದೇನೆ. ವಿರಾಟ್ ಕೊಹ್ಲಿ ಬ್ರಿಲಿಯಂಟ್ ಬ್ಯಾಟ್ಸ್`ಮನ್ ಇರಬಹುದು. ಆದರೆ, ನನ್ನೆದುರು ವಿಫಲವಾಗಿದ್ದಾರೆ ಎಂದು ಜುನೈದ್ ಖಾನ್ ಬಡಾಯಿ ಕೊಚ್ಚಿಕೊಂಡಿದ್ದಾನೆ. ವಿಪರ್ಯಾಸವೆಂದರೆ ಜುನೈದ್ ಖಾನ್ ಎಸೆದ 22 ೆಸೆತ ೆದುರಿಸಿರುವ ಕೊಹ್ಲಿ ಗಳಿಸಿರುವುದು ಕೇವಲ 2 ರನ್.

ಇದೇವೇಳೆ, ಭಾರತ ಮತ್ತು ಪಾಕಿಸ್ತಾನ ಪಂದ್ಯದ ನಿರೀಕ್ಷೆ ಬಗ್ಗೆ ಪ್ರತಿಕ್ರಿಯಿಸಿರುವ ಕೊಹ್ಲಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೆಂದರೆ ನಮಗೆ ಯಾವಾಗಲೂ ಅತ್ಯಂತ ರೋಚಕವಾಗಿದ್ದು, ಪಂದ್ಯದ ಸುತ್ತ ಏರ್ಪಡುವ ಹೈಪ್ ನಮ್ಮ ಕೈಯಲಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ