ಪಾಕಿಸ್ತಾನ ಕ್ರಿಕೆಟಿಗ ಮೊಹಮ್ಮದ್ ಇರ್ಪಾನ್`ಗೆ 1 ವರ್ಷ ನಿಷೇಧ

ಗುರುವಾರ, 30 ಮಾರ್ಚ್ 2017 (10:52 IST)
ಮ್ಯಾಚ್ ಫಿಕ್ಸಿಂಗ್ ಮಾಡುವುದಷ್ಟೇ ಅಲ್ಲ, ಮ್ಯಾಚ್ ಫಿಕ್ಸಿಂಗ್ ಆಫರ್ ಬಗ್ಗೆ ಕ್ರಿಕೆಟ್ ಮಂಡಳಿಗೆ ಮಾಹಿತಿ ನೀಡದಿರುವುದೂ ಸಹ ಅಪರಾಧ. ಪಾಕಿಸ್ತಾನ ಸೂಪರ್ ಲೀಗ್`ನಲ್ಲಿ ಮ್ಯಾಚ್ ಫಿಕ್ಸಿಂಗ್ ಆಫರ್ ಬಗ್ಗೆ ಕ್ರಿಕೆಟ್ ಮಂಡಳಿಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಪಾಕಿಸ್ತಾನದ ವೇಗಿ 7 ಅಡಿ ಎತ್ತರದ ಹಮ್ಮದ್ ಇರ್ಫಾನ್`ಗೆ 1 ವರ್ಷ ನಿಷೇಧ ಮತ್ತು 1 ಸಾವಿರ ಡಾಲರ್ ದಂಡ ವಿಧಿಸಿದೆ.

ಪಾಕಿಸ್ತಾನ ಸೂಪರ್ ಲೀಗ್ ಸಂದರ್ಭ ಬುಕ್ಕಿಗಳು ಮೊಹಮ್ಮದ್ ಇರ್ಫಾನ್ ಬಳಿ ಮ್ಯಾಚ್ ಫಿಕ್ಸಿಂಗ್ ಪ್ರಸ್ತಾಪ ಇಟ್ಟಿದ್ದರು. ಆದರೆ, ಮ್ಯಾಚ್ ಫಿಕ್ಸಿಂಗ್  ಒಪ್ಪಿಕೊಳ್ಳದೆ ಸ್ಫೂರ್ತಿ ಮೆರೆದ ಇರ್ಫಾನ್, ಈ ಮಾಹಿತಿಯನ್ನ ಕ್ರಿಕೆಟ್ ಮಂಡಳಿಗೆ ನೀಡದೇ ನಿರ್ಲಕ್ಷ್ಯ ವಹಿಸಿದ್ದರು. ಇದೀಗ, ನಿರ್ಲಕ್ಷ್ಯವೇ ಅವರಿಗೆ ಮುಳುವಾಗಿದೆ.

`ಬುಕ್ಕಿಗಳು ನನ್ನನ್ನ ಸಂಪರ್ಕಿಸಿದ್ದ ಬಗ್ಗೆ ನಾನು ಮಾಹಿತಿ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ, 2 ಆರೋಪಗಳ ಮೇಲೆ ನನಗೆ ಒಂದು ನಿಷೇಧ ಹೇರಿದ್ದಾರೆ, ಪಿಸಿಬಿ ನೀತಿ ಸಂಹಿತೆ ಪ್ರಕಾರ ಮ್ಯಾಚ್ ಫಿಕ್ಸಿಂಗ್ ರೀತಿಯ ಯಾವುದೇ ಪ್ರಸ್ತಾಪವನೆ ಬಂದರೂ ನಾವು ನಾವು ಪಿಸಿಬಿಗೆ ಮಾಹಿತಿ ನೀಡಬೇಕು. ಆದರೆ, ನಾನದನ್ನ ಮಾಡಲು ವಿಫಲವಾದೆ ಎಂದು ಮೊಹಮ್ಮದ್ ಇರ್ಫಾನ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ