ಪಾಕಿಸ್ತಾನಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲುವ ವಿಶ್ವಾಸ

ಶುಕ್ರವಾರ, 6 ಮಾರ್ಚ್ 2015 (20:06 IST)
ವಿಶ್ವಕಪ್‌ನಲ್ಲಿ ಪಾಕಿಸ್ತಾನ ದಕ್ಷಿಣ ಆಫ್ರಿಕಾ ವಿರುದ್ಧ ಎಡೆನ್‌ಪಾರ್ಕ್‌ನಲ್ಲಿ ಶನಿವಾರ ಆಡುತ್ತಿದೆ. ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ಮೇಲೆ ಸೋತ ಬಳಿಕ ಪಾಕಿಸ್ತಾನ ಗೆಲುವಿನ ಓಟ ಆರಂಭಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧವೂ ಅದು ಮುಂದುವರಿಯುತ್ತದೆಂದು ಆಶಿಸಿದೆ.

ಕ್ವಾರ್ಟರ್ ಫೈನಲ್ ಸ್ಥಾನ ಪಡೆಯುವ ತಮ್ಮ ಆಸೆಯನ್ನು ಜೀವಂತವಾಗಿರಿಸಲು ಪಾಕ್‌ ಈ ಪಂದ್ಯ ಗೆಲ್ಲಬೇಕಾಗಿದ್ದು, ದಕ್ಷಿಣ ಆಫ್ರಿಕಾದಂತ ದೊಡ್ಡ ತಂಡದ ವಿರುದ್ಧ ಗೆಲ್ಲುವ ಅವಶ್ಯಕತೆ ಇದೆ ಎಂದು ವಾಖರ್ ಯೂನಿಸ್ ತಿಳಿಸಿದರು.

 ಆದರೆ ವಿಶ್ವ ಕಪ್‌ನಲ್ಲಿ ಪಾಕಿಸ್ತಾನ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಎಲ್ಲಾ ಪಂದ್ಯಗಳಲ್ಲೂ ಸೋತಿದೆ.ವೇಗದ ಬೌಲರ್ ಮಹಮ್ಮದ್ ಇರ್ಫಾನ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಅವರು ಚೇತರಿಸಿಕೊಳ್ಳಬಹುದೆಂದು ಪಾಕಿಸ್ತಾನ ಆಶಿಸಿದೆ. 

ವೆಬ್ದುನಿಯಾವನ್ನು ಓದಿ