ಸಚಿನ್ ನಿವೃತ್ತಿ ಭಾಷಣವನ್ನು ಪಾಕ್‌ನ ಸಮಿ ಅಸ್ಲಾಂ ನೆನಪಿಸಿಕೊಳ್ಳುವುದೇಕೆ?

ಶುಕ್ರವಾರ, 26 ಆಗಸ್ಟ್ 2016 (16:35 IST)
ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿ ಕೆಲವು ಕಾಲ ಕಳೆದಿದೆ. ಅಭಿಮಾನಿಗಳು ಈಗಲೂ ಮಾಸ್ಟರ್ ಬ್ಯಾಟ್ಸ್‌ಮನ್ ನಿವೃತ್ತಿ ಭಾಷಣವನ್ನು ಅತ್ಯಂತ ವಾಕ್ಪಟುತ್ವದ, ಭಾವನಾತ್ಮಕ ಭಾಷಣ ಎಂದು ನೆನಪಿಸಿಕೊಳ್ಳುತ್ತಾರೆ.
 
ವೆಸ್ಟ್ ಇಂಡೀಸ್ ಮಾಜಿ ವೇಗಿ ಐಯಾನ್ ಬಿಷಪ್ ಪ್ರತಿಯೊಬ್ಬ ಕ್ರಿಕೆಟರ್ ಆ ಭಾಷಣದ ಪ್ರತಿಯನ್ನು ಇಟ್ಟುಕೊಂಡರೆ ಅವು ಉತ್ತಮ ಕ್ರಿಕೆಟರ್ ಮತ್ತು ಮಾನವ ಜೀವಿಯಾಗಲು ನೆರವಾಗುತ್ತದೆಂದು ಶಿಫಾರಸು ಮಾಡಿದ್ದರು.
 
ಈಗ ಪಾಕಿಸ್ತಾನದ ಕ್ರಿಕೆಟರ್ ಸಮಿ ಅಸ್ಲಾಂ,  ಬಿಷಪ್ ಹೇಳಿದ ರೀತಿಯಲ್ಲೇ ಮಾಡಿದ್ದಾರೆಂದು ಕಾಣುತ್ತದೆ. ಪಾಕ್ ಜನಪ್ರಿಯ ಕ್ರಿಕೆಟ್ ವೆಬ್‌ಸೈಟ್‌ನಲ್ಲಿನ ಸಂದರ್ಶನದಲ್ಲಿ ಎಡಗೈ ಆಟಗಾರ ತಾನು ತನ್ನ ಆಟದಲ್ಲಿ ಸುಧಾರಣೆ ಕಂಡುಕೊಳ್ಳಲು ತೆಂಡೂಲ್ಕರ್ ಭಾಷಣವನ್ನು ಸದಾ ನೆನಪಿಸಿಕೊಳ್ಳುವುದಾಗಿ ಬಹಿರಂಗ ಮಾಡಿದ್ದಾರೆ. 
 
ಸಚಿನ್ ಕೊನೆಯ ಟೆಸ್ಟ್ ಪಂದ್ಯವಾಡಿದಾಗ ಕೂಡ, ಅವರು ಇನ್ನೂ ಕಲಿಯುತ್ತಿರುವುದಾಗಿಯೂ ಸುಧಾರಣೆಗೆ ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದರು. ನಾನು ಕಲಿಯಬೇಕಾದ್ದು ತುಂಬಾ ಇದ್ದು ಅದು ಅನುಭವದಿಂದ ಜಗತ್ತಿನಾದ್ಯಂತ ಆಡುವುದರಿಂದ ಬರುತ್ತದೆ. ನೀವು ಸುಧಾರಣೆಯಾಗಿ ಪರಿಶ್ರಮ ಪಟ್ಟರೆ ಚೆನ್ನಾಗಿ ಆಡುತ್ತೀರಿ ಎಂದು ಅಸ್ಲಾಂ ಹೇಳಿದರು.
ಅತ್ಯಧಿಕ ಮಟ್ಟದಲ್ಲಿ ಸಾಧಿಸಲು ವಿರಾಟ್ ಕೊಹ್ಲಿಯಿಂದ ತಾವು ಸ್ಫೂರ್ತಿ ಪಡೆಯುವುದಾಗಿ ಕೂಡ ಅವರು ಹೇಳಿದರು.
 
ಪ್ರತಿಬಾರಿ ಸಚಿನ್ ಬ್ಯಾಟಿಂಗ್‌ಗೆ ಇಳಿಯುವಾಗ ಜೀವನವು ಅದರ ಮೇಲೆ ಅವಲಂಬಿಸಿರುವ ರೀತಿಯಲ್ಲಿ ಆಡುತ್ತಿದ್ದರು. ಪ್ರತಿಯೊಂದು ಇನ್ನಿಂಗ್ಸ್ ದೃಢ ಸಂಕಲ್ಪದಿಂದ ಹಿಂದಿನಂತೆ ಆಡುತ್ತಿದ್ದು ಯಾವುದನ್ನೂ ಹಗುರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಎಲ್ಲಾ ಮಾದರಿಗಳಲ್ಲಿ ಅವರ ಶ್ರೇಯಾಂಕಗಳನ್ನು ಗಮನಿಸಿದಾಗ ಅವರು ಮಹಾನ್ ಆಟಗಾರ ಎನ್ನುವುದು ಅರಿವಾಗುತ್ತದೆ.
 
ಅಸ್ಲಾಂ 2015ರಲ್ಲಿ ಚೊಚ್ಚಲ ಪ್ರವೇಶ ಮಾಡಿದ್ದರೂ ಪಾಕಿಸ್ತಾನ ತಂಡದಲ್ಲಿ ಆಯ್ಕೆಯಾಗಿರಲಿಲ್ಲ. ಅಂತಿಮವಾಗಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಕಮ್ ಬ್ಯಾಕ್ ಆಗಿ ಬರ್ಮಿಂಗ್‌ಹ್ಯಾಂ ಟೆಸ್ಟ್‌ನಲ್ಲಿ 82, 70 ಸ್ಕೋರ್ ಮಾಡಿದ್ದರು ಮತ್ತು ಓವಲ್‌ನಲ್ಲಿ 3 ಮತ್ತು ಅಜೇಯ 12 ಸ್ಕೋರ್ ಮಾಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ