ಪಾಕ್ ಸ್ಪಿನ್ನರ್ ಮೊಹಮ್ಮದ್ ಹಫೀಜ್‌ ಶಂಕಾಸ್ಪದ ಬೌಲಿಂಗ್ ಶೈಲಿಯ ಮರುಪರೀಕ್ಷೆ

ಸೋಮವಾರ, 25 ಜುಲೈ 2016 (14:47 IST)
ಪಾಕಿಸ್ತಾನದ  ಆಲ್‌ರೌಂಡರ್ ಮಹಮ್ಮದ್ ಹಫೀಜ್ ತಮ್ಮ ನವೀಕೃತ ಬೌಲಿಂಗ್ ಶೈಲಿಯ ಕುರಿತು ಮರುಪರೀಕ್ಷೆಗೆ ಒಳಗಾಗಲಿದ್ದಾರೆ. 

ಐಸಿಸಿ ಕಳೆದ ವರ್ಷ ಹಫೀಜ್ ಅವರಿಗೆ ಅನುಮಾನಾಸ್ಪದ ಬೌಲಿಂಗ್ ಶೈಲಿ ಹಿನ್ನೆಲೆಯಲ್ಲಿ  12 ತಿಂಗಳ ಅಮಾನತು ಶಿಕ್ಷೆಯನ್ನು ನೀಡಿತ್ತು. ಎರಡು ಬಾರಿ ಸ್ವತಂತ್ರ ತನಿಖೆಯಲ್ಲಿ ಅವರ ಬೌಲಿಂಗ್ ಶೈಲಿ ಕಾನೂನುಬಾಹಿರ ಎಂದು ಎರಡು ವರ್ಷಗಳ ಅವಧಿಯಲ್ಲಿ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಅವರಿಗೆ 12 ತಿಂಗಳ ನಿಷೇಧ ವಿಧಿಸಿದ್ದು, ನಿಷೇಧದ ಅವಧಿ ಈ ತಿಂಗಳಾರಂಭದಲ್ಲಿ ಮುಗಿದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಮರುಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಹಫೀಜ್ ಬೌಲಿಂಗ್ ಶೈಲಿಯ ಕುರಿತು ಐಸಿಸಿ ಮಾನ್ಯತೆಯ ಲೌಗ್‌ಬರೋ ಕೇಂದ್ರದಲ್ಲಿ  ಮರುಪರೀಕ್ಷೆ  ಕೊನೆಯ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಪಾಕ್ ಟೀಂ ಮ್ಯಾನೇಜರ್ ಇಂತಿಕಾಬ್ ಅಲಮ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 
 

ವೆಬ್ದುನಿಯಾವನ್ನು ಓದಿ