ಸೋತು ಸುಣ್ಣವಾಗಿ ಮರಳಿದ ಪಾಕ್ ಕ್ರಿಕೆಟ್ ತಂಡಕ್ಕೆ ವಿಮಾನ ನಿಲ್ದಾಣದಲ್ಲಿ ಸ್ವಾಗತ ಹೀಗಿತ್ತು ನೋಡಿ
ಭಾನುವಾರ, 29 ಜನವರಿ 2017 (09:08 IST)
ಕರಾಚಿ: ಆಸ್ಟ್ರೇಲಿಯಾ ಪ್ರವಾಸ ಕೈಗೊಂಡು ಪಾಕಿಸ್ತಾನ ಕ್ರಿಕೆಟ್ ತಂಡ ತವರಿಗೆ ಬಂದಿಳಿದಿದೆ. ಸಾಮಾನ್ಯವಾಗಿ ಆಟಗಾರರು ವಿಮಾನ ನಿಲ್ದಾಣದಲ್ಲಿ ಬಂದಿಳಿಯುವಾಗ ವಿಮಾನ ನಿಲ್ದಾಣದಲ್ಲಿ ಕಾದಿರುವ ಅಭಿಮಾನಿಗಳು ಭರ್ಜರಿ ಸ್ವಾಗತ ನೀಡುತ್ತಾರೆ. ಆದರೆ ಪಾಕ್ ತಂಡಕ್ಕೆ ಮಾತ್ರ ಉಲ್ಟಾ ಆಗಿದೆ.
ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನೆರಡೂ ಸೋತು ತವರಿಗೆ ಬಂದ ಕ್ರಿಕೆಟಿಗರು ಲಾಹೋರ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಆದರೆ ಎಂದಿನಂತೆ ಸ್ವಾಗತ ಕೋರುವ ಬದಲು ಅಭಿಮಾನಿಗಳು ಬೈಗುಳಗಳ ಸುರಿಮಳೆಗೈದು ಎದುರುಗೊಂಡರು. ಹಲವಾರು ಮಂದಿ ಇದಕ್ಕಾಗಿಯೇ ವಿಮಾನ ನಿಲ್ದಾಣದಲ್ಲಿ ಸೇರಿದ್ದರು.
ನಾಯಕ ಅಝರ್ ಅಲಿಯನ್ನು ಕಾಣುತ್ತಿದ್ದಂತೆ ಅವರ ಆಕ್ರೋಶ ಮುಗಿಲು ಮುಟ್ಟಿತು. “ನೀನು ಕ್ಯಾಪ್ಟನ್ಸಿ ಬಿಟ್ಟು ತೊಲಗು” ಎಂದು ಅವರ ಬಳಿ ಬಂದ ಅಭಿಮಾನಿಗಳು ಕೂಗಿ ಹೇಳಿದರು. ಇದಕ್ಕಿಂತ ಅವಮಾನ ಬೇಕೇ?
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ