ಅಸಂಬದ್ಧ ರಿವ್ಯೂಗೆ ಕರೆ ನೀಡಿ ನಗೆ ಪಾಟಲಿಗೀಡಾದ ಪಾಕಿಸ್ತಾನ ಕ್ರಿಕೆಟ್ ತಂಡ

ಗುರುವಾರ, 29 ಡಿಸೆಂಬರ್ 2016 (08:17 IST)
ಮೆಲ್ಬೋರ್ನ್: ಪಾಕಿಸ್ತಾನ ಕ್ರಿಕೆಟ್ ತಂಡ ಆಗಾಗ ವಿವಾದಗಳಿಂದ ಸುದ್ದಿಯಾಗುತ್ತದೆ. ಆದರೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಅಸಂಬದ್ಧ ರಿವ್ಯೂಗೆ ಕರೆ ನೀಡಿ ಅಕ್ಷರಶಃ ನಗೆ ಪಾಟಲಿಗೀಡಾಗಿದೆ.


ಬಾಕ್ಸಿಂಗ್ ಡೇ ಟೆಸ್ಟ್ ನ ಎರಡನೇ ಪಂದ್ಯದಲ್ಲಿ ಇಂದು ಆಸ್ಟ್ರೇಲಿಯಾ ಬ್ಯಾಟಿಂಗ್ ನಡೆಸುತ್ತಿತ್ತು. ಆರಂಭಿಕ ಡೇವಿಡ್ ವಾರ್ನರ್ ಬ್ಯಾಟಿಂಗ್ ಮಾಡುತ್ತಿದ್ದರು. ಇಂದಿನ ದಿನದ ಮೊದಲ ಓವರ್ ನಲ್ಲಿ ಮೊಹಮ್ಮದ್ ಅಮೀರ್ ಎಸೆದ ಬಾಲ್ ವಾರ್ನರ್ ಬ್ಯಾಟಿಗೆ ತಗುಲದೆ ವಿಕೆಟ್ ಕೀಪರ್ ಕೈ ಸೇರಿತ್ತು.

ಆದರೆ ಕೀಪರ್ ಸರ್ಫರಾಜ್ ಅಹಮ್ಮದ್ ಮತ್ತು ನಾಯಕ ಮಿಸ್ಬಾ ಉಲ್ ಹಕ್ ಗೆ ಅದೇನನಿಸಿತೋ ರಿವ್ಯೂಗೆ ಕರೆ ನೀಡಿದರು. ಆದರೆ ರಿಪ್ಲೇಯಲ್ಲಿ ನೋಡಿದಾಗ ಬಾಲ್ ಬ್ಯಾಟ್ ನಿಂದ ಒಂದು ಅಡಿಯಷ್ಟು ದೂರದಲ್ಲಿ ಹಾದು ಹೋಗುತ್ತಿತ್ತು. ರಿವ್ಯೂ ನೋಡಿ ಮಿಸ್ಬಾ ಮುಖ ಅವಮಾನದಿಂದ ಕೆಂಪಗಾಗಿದ್ದಂತೂ ಸುಳ್ಳಲ್ಲ. ನಂತರ ಟ್ವಿಟರ್ ನಲ್ಲಿ ಹಲವು ಮಂದಿ ಇದು ಕ್ರಿಕೆಟ್ ಚರಿತ್ರೆಯಲ್ಲೇ ಕೆಟ್ಟ ರಿವ್ಯೂ ಎಂದು ಟೀಕಾ ಪ್ರಹಾರಕ್ಕೊಳಗಾಯಿತು. ಅಂತೂ ಪಾಕ್ ಕ್ರಿಕೆಟ್ ವಿಶ್ವ ಮಟ್ಟದಲ್ಲಿ  ರಿವ್ಯೂ  ರಗಳೆಯಿಂದಾಗಿ ಅವಮಾನಕ್ಕೀಡಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ