ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸೋಲಿಸಿ ಕಪ್ ನಮ್ದೇ ಮಾಡಿಕೊಳ್ತೀವಿ ಎಂದ ಪಾಕ್ ಕ್ರಿಕೆಟಿಗ

ಗುರುವಾರ, 14 ಫೆಬ್ರವರಿ 2019 (08:59 IST)
ಇಸ್ಲಾಮಾಬಾದ್: ಈ ಬಾರಿಯ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಎನಿಸಿಕೊಂಡಿರುವ ಟೀಂ ಇಂಡಿಯಾಕ್ಕೆ ಸೆಡ್ಡು ಹೊಡೆದು ಕಪ್ ನಮ್ದೇ ಎಂದು ಬೀಗಲು ಪಾಕಿಸ್ತಾನ ರೆಡಿಯಾಗಿದೆ.


ಬಲಾಢ್ಯ ಬ್ಯಾಟಿಂಗ್ ಹೊಂದಿರುವ ಟೀಂ ಇಂಡಿಯಾ ಈಗಾಗಲೇ ವಿದೇಶೀ ಪಿಚ್ ಗಳಲ್ಲಿ ಸರಣಿ ಗೆದ್ದು, ವಿಶ್ವಕಪ್ ನಲ್ಲಿ ಸ್ಪರ್ಧಿಸಲಿರುವ ಇತರ ತಂಡಗಳಿಗೆ ಸವಾಲೆನಿಸಿದೆ. ಆದರೆ ಪಾಕಿಸ್ತಾನಕ್ಕೆ ಮಾತ್ರ ಭಾರತೀಯರ ಭಯವಿಲ್ಲವಂತೆ.

ಹಾಗಂತ ಪಾಕ್ ಮಾಜಿ ಕ್ರಿಕೆಟಿಗ ಮೊಯಿನ್ ಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದುವರೆಗೆ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು ಆರು ಬಾರಿ ಎದುರಿಸಿತ್ತು. ಇದುವರೆಗೆ ಭಾರತವನ್ನು ಸೋಲಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗಿಲ್ಲ.

ಆದರೆ ಈ ಬಾರಿ ಅದು ಸಾಧ್ಯವಾಗುತ್ತದೆ. ನಮ್ಮ ಬಳಿ ಉತ್ತಮ ಬೌಲರ್ಸ್ ಗಳಿದ್ದಾರೆ ಎಂದು ಮೊಯಿನ್ ಹೇಳಿಕೊಂಡಿದ್ದಾರೆ. ಈಗಿನ ಪಾಕಿಸ್ತಾನ ತಂಡಕ್ಕೆ ಟೀಂ ಇಂಡಿಯಾವನ್ನು ಸೋಲಿಸುವ ಸಾಮರ್ಥ್ಯವಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ