ಹೀಗೇ ಆದರೆ ಪಾಕಿಸ್ತಾನ ವಿಶ್ವಕಪ್ ನಲ್ಲಿ ಭಾಗವಹಿಸುವ ಅರ್ಹತೆ ಕಳೆದುಕೊಳ್ಳಲಿದೆ!

ಶನಿವಾರ, 28 ಜನವರಿ 2017 (08:48 IST)
ದುಬೈ: ಪಾಕಿಸ್ತಾನ ಕ್ರಿಕೆಟ್ ತಂಡ ಹೀನಾಯ ಸ್ಥಿತಿಯಲ್ಲಿದೆ. ಐಸಿಸಿ ಶ್ರೇಯಾಂಕದಲ್ಲಿ ಏಕದಿನ ಪಂದ್ಯಗಳಲ್ಲಿ ಪಾಕ್ ತಂಡ ಎಂಟನೇ ಸ್ಥಾನದಲ್ಲಿದೆ. ಇದು ಹೀಗೇ ಮುಂದುವರಿದರೆ ಮುಂದಿನ ವಿಶ್ವಕಪ್ ನಲ್ಲಿ ಭಾಗವಹಿಸುವ ಅರ್ಹತೆ ಕಳೆದುಕೊಳ್ಳಬಹುದು ಎಂದು ಐಸಿಸಿ ಎಚ್ಚರಿಸಿದೆ.
 

ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಪಾಕ್ ತಂಡ ಏಕದಿನ ಸರಣಿನ್ನು 4-1 ಅಂತರದಿಂದ ಸೋತಿದೆ. ನಾಯಕ ಅಝರ್ ಅಲಿ ನಾಯಕತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ತಂಡದಲ್ಲಿ ಯಾರೂ ಸುಧಾರಿತ ಪ್ರದರ್ಶನ ನೀಡುತ್ತಿಲ್ಲ. ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ.

ಇಂತಹ ದಯನೀಯ ಸ್ಥಿತಿಯಲ್ಲಿ ಪಾಕ್ ತಂಡಕ್ಕೆ ಐಸಿಸಿ ನೀಡಿರುವ ಈ ಎಚ್ಚರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಸಕ್ತ ಏಕದಿನ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ತಂಡಗಳಿವೆ. ಅದಕ್ಕಿಂತ ಮೇಲಿನ ಸ್ಥಾನದಲ್ಲಿ ಪಾಕ್ ತಂಡವಿದೆ. 2017 ರ ಸೆಪ್ಟೆಂಬರ್ ಒಳಗೆ ಅಗ್ರ ಏಳು ಸ್ಥಾನದಲ್ಲಿರುವ ತಂಡಗಳು ಮಾತ್ರ ಮುಂದಿನ ವಿಶ್ವಕಪ್ ಗೆ ನೇರ ಪ್ರವೇಶ ಪಡೆಯಲಿವೆ. ಇಲ್ಲದಿದ್ದರೆ ಒಂದು ಬಾರಿಯ ವಿಶ್ವ ಚಾಂಪಿಯನ್ ಪಾಕ್ ತಂಡ ಅರ್ಹತಾ ಪಂದ್ಯಗಳನ್ನಾಡಬೇಕಾದೀತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ