ದುಬೈ: ಡ್ವಾನ್ ಬ್ರಾವೊ ಅವರ ವೀರೋಚಿತ ಆಟದ ಹೊರತಾಗಿಯೂ ವೆಸ್ಟ್ ಇಂಡೀಸ್ ತಂಡ ಪಾಕಿಸ್ತಾನದ ವಿರುದ್ಧ ಮೊದಲ ಹಗಲು ರಾತ್ರಿ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಸೋತಿದೆ.
ಕುತೂಹಲಭರಿತ ಪಂದ್ಯದಲ್ಲಿ ಪಾಕಿಸ್ತಾನ ಅಂತಿಮವಾಗಿ 56 ರನ್ನುಗಳಿಂದ ಗೆಲುವು ಕಂಡಿತು. ಏಕಾಂಗಿಯಾಗಿ ಹೋರಾಡಿದ ಬ್ರಾವೊ 116 ರನ್ ಗಳಿಸಿದ್ದಾಗ ಯಾಸಿರ್ ಶಾ ಹಿಡಿದ ಅದ್ಭುತ ಕ್ಯಾಚ್ ಗೆ ಔಟಾದರು. ಅಂತಿಮವಾಗಿ ವೆಸ್ಟ್ ಇಂಡೀಸ್ ದಿನದ ಅಂತ್ಯಕ್ಕೆ 12 ಓವರ್ ಬಾಕಿಯಿದ್ದಾಗ 289 ರನ್ನುಗಳಿಗೆ ಆಲೌಟ್ ಆಯಿತು.
ಪಾಕಿಸ್ತಾನದ ಪರ ಅಝ್ಗರ್ ಆಲಿ ತ್ರಿಶತಕ (302*), ಗಳಿಸಿದ್ದರೆ, ಸ್ಪಿನ್ನರ್ ಯಾಸಿರ್ ಶಾ ಅತೀ ವೇಗವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ 100 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದರು. ಈ ಮೂಲಕ ಮೊದಲ ಹಗಲು ರಾತ್ರಿ ಪಂದ್ಯವನ್ನು ಸ್ಮರಣೀಯವಾಗಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ