ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ಐಪಿಎಲ್ 2025 ಮೆಗಾ ಹರಾಜಿನಲ್ಲಿ ಐಪಿಎಲ್ ಇತಿಹಾಸದಲ್ಲೇ ಭಾರತದ ಕ್ರಿಕೆಟರ್ ರಿಷಬ್ ಪಂತ್ ಅವರನ್ನು ₹27ಕೋಟಿ ಗರಿಷ್ಠ ಮೊತ್ತದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಖರೀದಿ ಮಾಡಿದೆ.
ಮೂಲ ಬೆಲೆ ₹2 ಕೋಟಿವಿನಿಂದ ಪ್ರಾರಂಭವಾದ ಹರಾಜಿನಲ್ಲಿ ರಿಷಬ್‌ಗೆ ಆರಂಭದಿಂದಲೇ ಬೇಡಿಕೆ ಹೆಚ್ಚಾಯಿತು. ತೀವ್ರ ಪೈಪೋಟಿಯಲ್ಲಿ ರಿಷಬ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ₹22 ಕೋಟಿವರೆಗೆ ಉಳಿಸಿಕೊಳ್ಳುವ ಪ್ರಯತ್ನ ನಡೆಸಿತು. ಕೊನೆಗೆ ಲಕ್ನೋ ತಂಡವು ಆರ್ ಟಿ ಎಂ ಬಳಸಿ ರಿಷಬ್ ಅವರನ್ನು ₹27 ಕೋಟಿ ತನ್ನದಾಗಿಸಿಕೊಂಡಿತು. ಈ ಮೂಲಕ ಇದುವರೆಗಿನ ಹರಾಜು ಪ್ರಕ್ರಿಯೆಯಲ್ಲಿ ದುಬಾರಿ ಖರೀದಿಯಾದ ಕ್ರಿಕೆಟರ್ ಆಗಿದ್ದಾರೆ.
ಹಲವಾರು ತಂಡಗಳು ಭಾರತೀಯ ನಾಯಕ-ಕಮ್-ವಿಕೆಟ್ ಕೀಪರ್‌ಗಾಗಿ ಹುಡುಕುತ್ತಿರುವ ಕಾರಣ ಅವರಿಗೆ ಬೇಡಿಕೆ ಹೆಚ್ಚಾಗಿದ್ದನ್ನು ಕಾಣಬಹುದು.
ಡೆಲ್ಲಿ ಕ್ಯಾಪಿಟಲ್ ತಂಡದಲ್ಲಿ 2016ರಿಂದ 2021ರಿಂದ ಕಳೆದ ಋತುವಿನವರೆಗೆ ಮುನ್ನಡೆಸಿದರು. ಡೆಲ್ಲಿ ಕ್ಯಾಪಿಟಲ್ಸ್‌ಯೊಂದಿಗಿನ ಧಾರಣ ಮಾತುಕತೆ ವಿಫಲವಾದ ನಂತರ ಪಂತ್ ಹರಾಜಿಗೆ ತೆರಳಲು ನಿರ್ಧರಿಸಿದರು, ಇದು ಹಣದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ಇತ್ತೀಚೆಗೆ ಸ್ಪಷ್ಟಪಡಿಸಿದರು.
ಇನ್ನೂ ಇದಕ್ಕೂ ಮುನ್ನಾ ಕ್ರಿಕೆಟರ್ ಮಿಚೆಲ್ ಸ್ಟಾರ್ಕ್ಸ್ ಅವರನ್ನು ₹ 11.75ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತು.