ಪಂಜಾಬ್ ಕ್ರಿಕೆಟ್ ಸಂಸ್ಥೆಗೆ ಕ್ರಿಕೆಟಿಗರ ಬೆದರಿಕೆ

ಭಾನುವಾರ, 23 ಅಕ್ಟೋಬರ್ 2016 (11:34 IST)
ಮೊಹಾಲಿ: ಲೋಧಾ ಸಮಿತಿ ಸೂಚಿಸಿದ ಸುಧಾರಣಾ ಕ್ರಮಗಳನ್ನು ಕೈಗೊಳ್ಳದಿದ್ದರೆ, ಪರ್ಯಾಯ ಕ್ರಿಕೆಟ್ ಸಂಸ್ಥೆ ಮಾಡುವುದಾಗಿ ಪಂಜಾಬ್ ನ ಮಾಜಿ ರಣಜಿ ಕ್ರಿಕೆಟಿಗರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಪಂಜಾಬ್ ಕ್ರಿಕೆಟ್ ಸಂಸ್ಥೆ ಲೋಧಾ ಸಮಿತಿಯ ಹೇಳಿದ ಅಂಶಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ.

ಲೋಧಾ ಸಮಿತಿ ವರದಿಯಲ್ಲಿ ಕ್ರಿಕೆಟಿಗರು ರಾಜ್ಯ ಸಂಸ್ಥೆಗಳ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿರಬೇಕೆಂದು ಹೇಳಿದೆ. ಹೀಗಾಗಿ ಕ್ರಿಕೆಟಿಗರನ್ನು ಸೇರಿಸಿಕೊಳ್ಳುವಂತೆ ಮಾಜಿ ಕ್ರಿಕೆಟಿಗರು ಆಗ್ರಹಿಸಿದ್ದಾರೆ.

ಅಲ್ಲದೆ ಮಾಜಿ ಕ್ರಿಕೆಟಿಗರು ಪಂಜಾಬ್ ಕ್ರಿಕೆಟ್ ಸಂಸ್ಥೆಯಲ್ಲಿ ಹಣಕಾಸಿನ ದುರುಪಯೋಗವಾಗುತ್ತಿದೆ ಎಂದೂ ಆರೋಪಿಸಿದ್ದಾರೆ. “ನಮಗೆ ಲೋಧಾ ಸಮಿತಿಯ ವರದಿ ಜಾರಿ ಮಾಡುವುದಕ್ಕೆ ತೊಂದರೆಯೇನಿಲ್ಲ. ಆದರೆ ನಮ್ಮದು ಜಿಲ್ಲಾ ವಲಯಗಳನ್ನು ಹೊಂದಿದ ಸಂಸ್ಥೆ. ಅವರೆಲ್ಲರ ಒಪ್ಪಿಗೆಯೊಂದಿಗೆ ವರದಿ ಜಾರಿ ಮಾಡಲು ಸ್ವಲ್ಪ ಸಮಯ ಬೇಕು” ಎಂದು ಪಿಸಿಎ ಕಾರ್ಯದರ್ಶಿ ಜಿ ಎಸ್ ವಾಲಿಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ