ಟೀಂ ಇಂಡಿಯಾಕ್ಕೆ ದಂಡ ಹಾಕಿದ್ದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸಂತಸ

ಗುರುವಾರ, 24 ನವೆಂಬರ್ 2016 (11:47 IST)
ಕರಾಚಿ: ತನ್ನ ಜತೆ ಕ್ರಿಕೆಟ್ ಸರಣಿ ಆಡದೇ ಇರುವುದಕ್ಕೆ ಟೀಂ ಇಂಡಿಯಾ ಮಹಿಳಾ ತಂಡಕ್ಕೆ ದಂಡ ಹಾಕಿರುವ ಐಸಿಸಿ ಕ್ರಮವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸ್ವಾಗತಿಸಿದೆ.

ಐಸಿಸಿಯ ತಾಂತ್ರಿಕ ಸಮಿತಿ ನಿನ್ನೆ ಉಭಯ ದೇಶಗಳ ನಡುವೆ ನಡೆಯಬೇಕಿದ್ದ ಕ್ರಿಕೆಟ್ ಸರಣಿಯಲ್ಲಿ ಆಡದೇ ಇದ್ದ ಮಹಿಳಾ ತಂಡಕ್ಕೆ ಚಾಂಪಿಯನ್ಸ್ ಶಿಪ್ ಟೂರ್ನಿಯಲ್ಲಿ 6 ಅಂಕ ಕಳೆಯುವ ಮೂಲಕ ಶಿಕ್ಷೆ ವಿಧಿಸಿತ್ತು. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಇದನ್ನು ಸ್ವಾಗತಿಸಿದೆ.

ಈ ಮೊದಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಉಭಯ ದೇಶಗಳ ನಡುವೆ ಒಪ್ಪಂದವಾದ ಸರಣಿ ನಡೆಯದೇ ತನಗೆ ನಷ್ಟವಾಗಿದೆ. ಹೀಗಾಗಿ ಬಿಸಿಸಿಐ ಸಂಸ್ಥೆಯಿಂದ ನಷ್ಟ ಪರಿಹಾರ ಕೊಡಿಸಬೇಕು ಎಂದೂ ಐಸಿಸಿಗೆ ಪತ್ರ ಬರೆದಿತ್ತು. ಉರಿ ದಾಳಿ ಹಿನ್ನಲೆಯಲ್ಲಿ ಭಾರತ ಸರ್ಕಾರ ಪಾಕಿಸ್ತಾನದೊಂದಿಗಿನ ಯಾವುದೇ ವ್ಯವಹಾರಕ್ಕೆ ಒಪ್ಪಿಗೆ ನೀಡುತ್ತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ