ಕ್ರಿಕೆಟ್ ಆಡದ ಭಾರತದ ಬಳಿ ಪಾಕ್ ಕೇಳುತ್ತಿದೆ ಈ ದುಬಾರಿ ಹಣ!

ಭಾನುವಾರ, 1 ಅಕ್ಟೋಬರ್ 2017 (07:04 IST)
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಸಂಬಂಧ ಹಳಸಿದ ಹಿನ್ನಲೆಯಲ್ಲಿ ಉಭಯ ದೇಶಗಳ ನಡುವೆ ಒಪ್ಪಂದವಾಗಿದ್ದ ಸರಣಿ ನಡೆಯುತ್ತಿಲ್ಲ. ಇದನ್ನು ಮುಂದಿಟ್ಟುಕೊಂಡು ಪಾಕ್, ಭಾರತದ ಬಳಿ ಪರಿಹಾರದ ರೂಪದಲ್ಲಿ ದುಬಾರಿ ಮೊತ್ತ ಕೇಳಿದೆ.

 
2014 ರಲ್ಲಿ ಬಿಸಿಸಿಐ ಆರು ಕ್ರಿಕೆಟ್ ಸರಣಿಗಳನ್ನು ಆಡುವುದಾಗಿ ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಒಪ್ಪಂದದ ಪ್ರಕಾರ ಸರಣಿ ಆಡದೇ ಒಪ್ಪಂದ ಮುರಿದಿದೆ. ಗಡಿ ವಿವಾದವನ್ನು ಮುಂದಿಟ್ಟುಕೊಂಡು ಸರಣಿ ಆಡಲು ಒಪ್ಪದೇ ನಮಗೆ ನಷ್ಟವುಂಟುಮಾಡಿದೆ. ಹೀಗಾಗಿ ಪರಿಹಾರ ದೊರಕಿಸಿಕೊಡಬೇಕೆಂದು ಪಿಸಿಬಿ ಐಸಿಸಿ ಬಾಗಿಲು ತಟ್ಟಿದೆ.

ಮೂಲವೊಂದರ ಪ್ರಕಾರ ಪಿಸಿಬಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ಪರಿಹಾರದ ರೂಪವಾಗಿ 70 ಮಿಲಿಯನ್ ಅಮೆರಿಕನ್ ಡಾಲರ್ ಪರಿಹಾರ ಕೇಳಲಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಕಾನೂನು ಹೋರಾಟ ನಡೆಸಲೂ ಅದು ಮುಂದಾಗಿದೆ.

ಉರಿ ದಾಳಿ ನಂತರ ಪಾಕ್ ಜತೆ ಯಾವುದೇ ರೀತಿಯ ಕ್ರಿಕೆಟ್ ಆಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಆದೇಶಿಸಿದ ಹಿನ್ನಲೆಯಲ್ಲಿ ಬಿಸಿಸಿಐ ಆ ದೇಶದೊಂದಿಗೆ ಒಪ್ಪಂದದ ಪ್ರಕಾರ ಸರಣಿಯಲ್ಲಿ ಪಾಲ್ಗೊಂಡಿಲ್ಲ. ತಟಸ್ಥ ಸ್ಥಳದಲ್ಲಾದರೂ ಆಡಲು ಸರ್ಕಾರ ಒಪ್ಪಿಗೆ ಕೊಡುತ್ತಿಲ್ಲ ಎನ್ನುವ ಕಾರಣಕ್ಕೆ ಬಿಸಿಸಿಐ ಮೌನವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ