ನಮ್ಮ ಜತೆ ಆಡಲ್ವಾ? ಅನುಭವಿಸಿ..! ಬಿಸಿಸಿಐಗೆ ಪಾಕ್ ಕ್ರಿಕೆಟ್ ಮಂಡಳಿ ಎಚ್ಚರಿಕೆ

ಶುಕ್ರವಾರ, 31 ಮಾರ್ಚ್ 2017 (09:43 IST)
ಕರಾಚಿ: ಮೊದಲೇ ಒಪ್ಪಂದವಾದ ಕ್ರಿಕೆಟ್ ಸರಣಿ ಆಡಲು ಭಾರತೀಯ ಕ್ರಿಕೆಟ್ ಮಂಡಳಿ ಇನ್ನೂ ಮುಂದಾಗದೇ ಇರುವುದಕ್ಕೆ ಪಾಕ್ ಕ್ರಿಕೆಟ್ ಮಂಡಳಿ ಸಿಟ್ಟಿಗೆದ್ದಿದೆ. ಕಾನೂನು ಸಮರಕ್ಕೆ ಮುಂದಾಗಲು ನಿರ್ಧರಿಸಿದೆ.

 

‘ಎಷ್ಟು ಬಾರಿ ಈ ಬಗ್ಗೆ ಮನವಿ ಮಾಡಿಕೊಂಡರೂ ಬಿಸಿಸಿಐ ಕಿವಿ ಮೇಲೇ ಹಾಕಿಕೊಳ್ಳುವಂತೆ ಕಾಣುತ್ತಿಲ್ಲ. ಹೀಗಾಗಿ ಕಾನೂನು ಸಮರವಲ್ಲದೆ ನಮ್ಮ ಮುಂದೆ ಬೇರೆ ಆಯ್ಕೆಗಳಿಲ್ಲ’ ಎಂದು ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಹರ್ಯಾರ್ ಖಾನ್ ಹೇಳಿದ್ದಾರೆ.

 
2014 ರಿಂದ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ನಡೆದಿಲ್ಲ. ಉರಿಯಲ್ಲಿ ಸೇನಾ ನೆಲೆ ಮೇಲೆ ದಾಳಿ ನಡೆದ ಮೇಲಂತೂ ಉಭಯ ದೇಶಗಳ ನಡುವೆ ಸಂಬಂಧ ಸಂಪೂರ್ಣ ಹದಗೆಟ್ಟಿದ್ದು, ಕೇಂದ್ರ ಸರ್ಕಾರ ಕ್ರಿಕೆಟ್ ಸರಣಿ ನಡೆಸಲು ಬಿಲ್ ಕುಲ್ ಒಪ್ಪುತ್ತಿಲ್ಲ. ಇದಕ್ಕೀಗ ಬಿಸಿಸಿಐ ಭಾರೀ ದಂಡ ತೆರೆಬೇಕಾಗಬಹುದು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ