ಪೆರೇರಾ ಅಮೋಘ ಸ್ಪಿನ್ ದಾಳಿ: ಆಸ್ಟ್ರೇಲಿಯಾಗೆ ಶ್ರೀಲಂಕಾ ವಿರುದ್ಧ ಸರಣಿ ಸೋಲು
ಶನಿವಾರ, 6 ಆಗಸ್ಟ್ 2016 (15:34 IST)
ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಫ್‌ಸ್ಪಿನ್ನರ್ ದಿಲ್‌ರುವಾನ್ ಪೆರೀರಾ ಬೌಲಿಂಗ್ ದಾಳಿಗೆ ನಲುಗಿದ ಆಸ್ಟ್ರೇಲಿಯಾ ಕೇವಲ 183 ರನ್‌ಗೆ ಆಲೌಟ್ ಆಗುವ ಮೂಲಕ ಶ್ರೀಲಂಕಾ ಐತಿಹಾಸಿಕ ಟೆಸ್ಟ್ ಸರಣಿ ಜಯಗಳಿಸಿದೆ.
ದಿಲ್‌ರುವಾನ್ ಪೆರೇರಾ 6 ವಿಕೆಟ್ ಕಬಳಿಸಿ ಶ್ರೇಷ್ಟ ಬೌಲಿಂಗ್ ಸಾಧನೆ ಮಾಡಿದ್ದು, ಆಸೀಸ್ 229 ರನ್ ಹೀನಾಯ ಸೋಲು ಅನುಭವಿಸಿತು. ಪೆರೇರಾಗೆ ಡೇವಿಡ್ ವಾರ್ನರ್ ಎಲ್‌ಬಿಡಬ್ಲ್ಯುಗೆ ಬಲಿಯಾದರು. ನಾಥನ್ ಲಯನ್ ಕೂಡ ಸಿಲ್ವಾಗೆ ಕ್ಯಾಚಿತ್ತು ಪೆರೇರಾ ಎಸೆತಕ್ಕೆ ಔಟಾದರು. ಉಸ್ಮಾನ್ ಕ್ವಾಜಾ ಅವರನ್ನು ಪೆರೇರಾ ಬೌಲ್ಡ್ ಮಾಡಿದರು. ಸ್ಟೀವನ್ ಸ್ಮಿತ್, ವೋಗ್ಸ್ ಮತ್ತು ಹ್ಯಾಜಲ್‌ವುಡ್ ವಿಕೆಟ್‌ಗಳನ್ನು ಪೆರೇರಾ ಕಬಳಿಸಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ರಂಗನಾ ಹೆರಾತ್ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಮೂಲಕ ಶ್ರೀಲಂಕಾ ಜಯಕ್ಕೆ ಮುನ್ನುಡಿ ಬರೆದರು. ಆಸೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 106 ರನ್‌ಗಳಿಗೆ ಆಲೌಟ್ ಆಗಿತ್ತು.
ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ ಪೆರೇರಾ ಮಾರಕ ಸ್ಪಿನ್ ಆಡಲಾಗದೇ ತಿಣುಕಾಡಿದ ಆಸ್ಟ್ರೇಲಿಯಾ ಆಟಗಾರರು 50. 1 ಓವರುಗಳಲ್ಲೇ ಪೆವಿಲಿಯನ್ ಹಾದಿ ಹಿಡಿದರು. ಪೆರೇರಾ 70 ರನ್‌ಗಳಿಗೆ 6 ವಿಕೆಟ್ ಕಬಳಿಸಿ ಶ್ರೇಷ್ಟ ಸಾಧನೆ ಮಾಡಿದರು. 1999ರಲ್ಲಿ ಶ್ರೀಲಂಕಾ ಆಸೀಸ್ ವಿರುದ್ಧ ಸರಣಿ ಜಯಗಳಿಸಿತ್ತು.
ಶ್ರೀಲಂಕಾ ಪಾಲೆಕೆಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 106 ರನ್‌ಗಳಿಂದ ಜಯಗಳಿಸಿತ್ತು. ಶ್ರೀಲಂಕಾ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ 17 ವರ್ಷಗಳ ನಂತರ ಮತ್ತೆ ಗಾಲೆಯಲ್ಲಿ ಇತಿಹಾಸ ನಿರ್ಮಾಣ ಮಾಡಿದೆ. ಸ್ಪಿನ್ ತ್ರಯರ ವಿರುದ್ಧ ಆಸೀಸ್ ಯಾವ ರೀತಿಯ ಒತ್ತಡದಲ್ಲಿದ್ದರು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ಶ್ರೀಲಂಕಾ ಮೊದಲ ಇನ್ನಿಂಗ್ಸ್ 281ಕ್ಕೆ ಆಲೌಟ್
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 106ಕ್ಕೆ ಆಲೌಟ್
ಶ್ರೀಲಂಕಾ ಎರಡನೇ ಇನ್ನಿಂಗ್ಸ್ 237ಕ್ಕೆ ಆಲೌಟ್
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ 180ಕ್ಕೆ ಆಲೌಟ್, ಶ್ರೀಲಂಕಾಗೆ 229 ರನ್‌ಗಳಿಂದ ಜಯ
ವಾರ್ನರ್ 41 ರನ್, ಸ್ಟೀವನ್ ಸ್ಮಿತ್ 30 ರನ್, ಪೀಟರ್ ನೆವಿಲ್ 24 ರನ್, ಮಿಚೆಲ್ ಸ್ಟಾರ್ಕ್ 26 ರನ್.