ಐಪಿಎಲ್ ಆಡಿದ ವೆಸ್ಟ್ ಇಂಡೀಸ್ ಆಟಗಾರರ ಭೇಟಿಗೆ ಫಿಲ್ ಸಿಮ್ಮನ್ಸ್ ಇಚ್ಛೆ

ಮಂಗಳವಾರ, 26 ಮೇ 2015 (17:07 IST)
ಐಪಿಎಲ್‌ನಲ್ಲಿ ಅಗ್ರ ಪ್ರದರ್ಶನ ನೀಡಿದ  ಐವರು ವೆಸ್ಟ್ ಇಂಡೀಸ್ ಆಟಗಾರರನ್ನು ಭೇಟಿ ಮಾಡಿ ಟೆಸ್ಟ್ ಕ್ರಿಕೆಟ್ ಕುರಿತು ಚರ್ಚಿಸಲು ವೆಸ್ಟ್ ಇಂಡೀಸ್ ನೂತನ ಹೆಡ್ ಕೋಚ್ ಫಿಲ್ ಸಿಮ್ಮನ್ಸ್ ಬಯಸಿದ್ದಾರೆ.
 
ಸಿಮ್ಮನ್ಸ್ ಡ್ವೇನ್ ಬ್ರೇವೋ, ಲೆಂಡ್ಲ್ ಸಿಮ್ಮನ್ಸ್, ಸುನಿಲ್ ನಾರಾಯಣ್, ರಸೆಲ್ ಮತ್ತು ಕೀರನ್ ಪೋಲಾರ್ಡ್ ಅವರ ಜತೆ ಮಾತನಾಡಿ ಕ್ಯಾರಿಬಿಯನ್ ಟೆಸ್ಟ್ ತಂಡಕ್ಕೆ  ವಾಪಸಾಗುವ ಸಾಧ್ಯತೆ ಕುರಿತು ಸಿಮ್ಮನ್ಸ್  ಚರ್ಚಿಸಲಿದ್ದಾರೆ. 
 
 ಐಪಿಎಲ್ ಫೈನಲ್ ಮುಗಿದಿರುವುದರಿಂದ  ಅದರಲ್ಲಿ ಒಳಗೊಂಡಿದ್ದ ನಾಲ್ಕು ವೆಸ್ಟ್ ಇಂಡೀಸ್ ಆಟಗಾರರನ್ನು  ವೆಸ್ಟ್ ಇಂಡೀಸ್ ತಂಡಕ್ಕೆ ವಾಪಸು ಕರೆಸಿಕೊಳ್ಳುವುದನ್ನು ನಿರೀಕ್ಷಿಸಲಾಗಿದೆ ಎಂದು ಸಿಎಂಸಿ ವರದಿ ಮಾಡಿದೆ. 
 
ನಾನು ಅವರ ಜೊತೆ ಕುಳಿತು ಮಾತನಾಡಿ, ವೆಸ್ಟ್ ಇಂಡೀಸ್ ಕ್ರಿಕೆಟ್ ಮುಂದಕ್ಕೆ ಒಯ್ಯುವುದು ಹೇಗೆಂಬ ನನ್ನ ಮತ್ತು ಆಯ್ಕೆದಾರರ ದೃಷ್ಟಿಕೋನವನ್ನು ಚರ್ಚಿಸುತ್ತೇವೆ ಎಂದು ಸಿಮ್ಮನ್ಸ್ ಹೇಳಿದ್ದಾರೆ. 
 
ಬ್ರೇವೋ ಮತ್ತು ಲೆಂಡ್ಸ್ ಸಿಮ್ಮನ್ಸ್ ಟೆಸ್ಟ್ ನಿವೃತ್ತಿಗಳನ್ನು ಘೋಷಿಸಿದ್ದರೆ, ಪೋಲಾರ್ಡ್ ಮೊದಲ ದರ್ಜೆ ಕ್ರಿಕೆಟ್‌ನಿಂದ ಈ ವರ್ಷಾರಂಭದಲ್ಲಿ  ಅನಿರ್ದಿಷ್ಟ ವಿರಾಮ ತೆಗೆದುಕೊಂಡಿದ್ದಾರೆ. ಸುದೀರ್ಘ ಮಾದರಿಯ ಕ್ರಿಕೆಟ್ ಆಡುವುದಕ್ಕೆ ತಾವು ದೈಹಿಕವಾಗಿ ಶಕ್ತರಲ್ಲ ಎಂದು ರಸೆಲ್ ಇಂಗಿತ ನೀಡಿದ್ದಾರೆ. ನಾರಾಯಣ್ ಅವರನ್ನು ಶಂಕಿತ ಬೌಲಿಂಗ್ ಶೈಲಿಯಿಂದ ಬದಿಗೆ ತಳ್ಳಲಾಗಿದೆ. 
ವಾಸ್ತವವಾಗಿ ಪ್ರತಿಯೊಬ್ಬರೂ ಈ ಆಟಗಾರರು ಟೆಸ್ಟ್ ಆಡುವುದನ್ನು ನೋಡಬಯಸುತ್ತಾರೆ. ಏಕೆಂದರೆ ಆ ಮಾದರಿಯ ಕ್ರಿಕೆಟ್ ಆಡಲು ಅವರು ಸೂಕ್ತರಾಗಿದ್ದಾರೆ. ಬ್ರೇವೊ ಹೇಳಿಕೆ ಬಗ್ಗೆ ತಮಗೆ ಅರಿವಿಲ್ಲ ಎಂದು ಸಿಮ್ಮನ್ಸ್ ಹೇಳಿದರು.
 
 ಮಾರ್ಚ್‌ನಲ್ಲಿ ಕೋಚ್ ಹುದ್ದೆಗೆ ನೇಮಕವಾದ ಸಿಮ್ಮನ್ಸ್, ವೆಸ್ಟ್ ಇಂಡೀಸ್ ತಂಡ ಮತ್ತು ಐಪಿಎಲ್‌ನಲ್ಲಿ ಭಾಗವಹಿಸಿದ ದೇಶೀಯ ಆಟಗಾರರ ನಡುವೆ ಉತ್ತಮ ಸಂಬಂಧಕ್ಕೆ ಉತ್ತೇಜನ ನೀಡಲು ಬಯಸಿದ್ದಾರೆ. 

ವೆಬ್ದುನಿಯಾವನ್ನು ಓದಿ