ವಿರಾಟ್ ಕೊಹ್ಲಿ ಚೊಚ್ಚಲ ಶತಕ ವ್ಯರ್ಥ: ಗುಜರಾತ್ ಲಯನ್ಸ್‌‍ಗೆ ಗೆಲುವು

ಸೋಮವಾರ, 25 ಏಪ್ರಿಲ್ 2016 (11:06 IST)
ರಾಯಲ್ ಚಾಲೆಂಜರ್ಸ್ ಮತ್ತು ಗುಜರಾತ್ ಲಯನ್ಸ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ 180 ರನ್ ಸವಾಲಿನ ಸ್ಕೋರನ್ನು ದಾಖಲಿಸಿದರೂ ಬೌಲಿಂಗ್ ವೈಫಲ್ಯದಿಂದ ಮತ್ತೊಮ್ಮೆ ಸೋಲಿನ ರುಚಿ ಕಂಡಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ರಾಯಲ್ ಪರ ವಿರಾಟ್ ಕೊಹ್ಲಿ ಚುಟುಕು ಓವರುಗಳ ಪಂದ್ಯದಲ್ಲಿ ಚೊಚ್ಚಲ ಶತಕ ಬಾರಿಸುವ ಮೂಲಕ ಮಿಂಚಿದರು. ಆದರೆ ರಾಯಲ್ ಚಾಲೆಂಜರ್ಸ್ ಬೌಲರುಗಳ ಪರಿಣಾಮಕಾರಿ ಬೌಲಿಂಗ್ ವೈಫಲ್ಯದಿಂದ ಆ ಸ್ಕೋರನ್ನು ರಕ್ಷಿಸಿಕೊಳ್ಳಲು ವಿಫಲವಾಗಿ ಸೋಲಪ್ಪಿತು. ರಾಯಲ್ ಕಡೆ  ಲೋಕೇಶ್ ರಾಹುಲ್ 51 ರನ್ ಬಾರಿಸಿದರು.
 
ಮೆಕಲಮ್ ಮತ್ತು ದಿನೇಶ್ ಕಾರ್ತಿಕ್ ಉತ್ತಮ ಬ್ಯಾಟಿಂಗ್ ನೆರವಿನಿಂದ 19.3 ಓವರುಗಳಲ್ಲಿ 182 ರನ್ ಬಾರಿಸಿ ಚಾಲೆಂಜರ್ಸ್ ಸ್ಕೋರಿನ ಗಡಿಯನ್ನು ದಾಟಿದರು.  ಮೆಕಲಮ್ 24 ಎಸೆತಗಳಲ್ಲಿ ಬಿರುಸಿನ 42ರನ್ ಬಾರಿಸಿದರು ಮತ್ತು ದಿನೇಶ್ ಕಾರ್ತಿಕ್  39 ಎಸೆತಗಳಲ್ಲಿ 50 ರನ್ ಗಳಿಸಿದರು. ರಾಯಲ್ ಚಾಲೆಂಜರ್ಸ್ ಆರಂಭದ ಓವರುಗಳಲ್ಲಿ ಹೆಚ್ಚು ರನ್ ಕೊಟ್ಟಿದ್ದು ದುಬಾರಿಯಾಗಿ ಪರಿಣಮಿಸಿತು.
 
6ನೇ ಓವರಿನಲ್ಲಿ ಕೇನ್ ರಿಚರ್ಚ್ ಸನ್ ಬೌಲಿಂಗ್‌ನಲ್ಲಿ ಒಟ್ಟು 25 ರನ್ ಚಚ್ಚಿದರು. ಮೆಕಲಮ್ ಆ ಓವರಿನಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಬಾರಿಸಿದ್ದರು. ವಿರಾಟ್ ಕೊಹ್ಲಿ ಉತ್ತಮ ಸ್ಕೋರನ್ನು ದಾಖಲಿಸಿದರೂ ಮತ್ತೊಮ್ಮೆ ಬೌಲಿಂಗ್ ವೈಫಲ್ಯ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮುಳುವಾಗಿ ಪರಿಣಮಿಸಿತು. ಧವಲ್ ಕುಲಕರ್ಣಿ ಮತ್ತು ಪ್ರವೀಣ್ ತಾಂಬೆ ತಲಾ ಒಂದು ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ