ಭಾರತ-ನ್ಯೂಜಿಲೆಂಡ್ ಟಿ20: ಟೀಂ ಇಂಡಿಯಾ ಗೆಲುವಿಗೆ 177 ರನ್ ಗುರಿ
ಮೊದಲು ಬ್ಯಾಟಿಂಗ್ ಆರಂಭಿಸಿದ ಕಿವೀಸ್ ಬ್ಯಾಟಿಗರು ಉತ್ತಮ ಆರಂಭ ಪಡೆದರು. ಡೆವನ್ ಕಾನ್ವೇ 35 ಎಸೆತಗಳಲ್ಲಿ 52, ಫಿನ್ ಅಲೆನ್ 23 ಎಸೆತಗಳಲ್ಲಿ 35 ರನ್ ಗಳಿಸಿದರು. ಮಧ‍್ಯಮ ಕ್ರಮಾಂಕ ಬ್ಯಾಟಿಂಗ್ ಕೈ ಕೊಟ್ಟಿದ್ದರಿಂದ ಕಿವೀಸ್ 200 ರ ಗಡಿ ತಲುಪಲು ವಿಫಲವಾಯಿತು.
ಆದರೆ ಕೊನೆಯಲ್ಲಿ ಅಬ್ಬರಿಸಿದ ಡೆರಿಲ್ ಮಿಚೆಲ್ ಕೇವಲ 30 ಎಸೆತಗಳಲ್ಲಿ 59 ರನ್ ಚಚ್ಚಿದರು. 19 ನೆಯ ಓವರ್ ನಲ್ಲಿ ಡೆರಿಲ್ ಸತತ ಸಿಕ್ಸರ್ ಬಾರಿಸಿ ತಂಡಕ್ಕೆ ಭರ್ಜರಿ ಮೊತ್ತ ಗಳಿಸಿಕೊಟ್ಟರು. ಇದರೊಂದಿಗೆ ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು.