ಬಿಸಿಸಿಐ ಲಾಭದಲ್ಲಿ ಕುಸಿತ: ಆಟಗಾರರಿಗೆ ಬೋನಸ್ ಕಡಿತ

ಶನಿವಾರ, 23 ಮೇ 2015 (12:06 IST)
ಪ್ರತಿ ವರ್ಷ ಬಿಸಿಸಿಐನ ಗುತ್ತಿಗೆ ಆಟಗಾರರು ಮಂಡಳಿ ಸಂಪಾದಿಸುವ ಲಾಭದಲ್ಲಿ ಶೇ. 13ರಷ್ಟು ಬೋನಸ್ ಪಡೆಯುತ್ತಾರೆ. ಆದರೆ ಈ ಬಾರಿ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ  56 ಕೋಟಿ ಕಾನೂನು ವೆಚ್ಚವಾದ ಹಿನ್ನೆಲೆಯಲ್ಲಿ ಲಾಭವು ಕುಂಠಿತವಾಗಿರುವುದರಿಂದ ಆಟಗಾರರ ಗಳಿಕೆಯಲ್ಲಿ ಕಡಿತ ಮಾಡಬೇಕೆಂದು ಮಂಡಳಿಯ ಹಣಕಾಸು ಸಮಿತಿ ಭಾವಿಸಿದೆ. 
 
ಬಿಸಿಸಿಐ ವೆಚ್ಚವು ಹೆಚ್ಚಿದ್ದರಿಂದಾಗಿ ಅದರ ಹಣದ ಥೈಲಿಯಿಂದ ಆಟಗಾರರ ಜೇಬನ್ನು ತುಂಬಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಸಮಿತಿ ಭಾವಿಸಿದೆ. 
2013-14ರಲ್ಲಿ ಮಂಡಳಿಯು 526 ಕೋಟಿ ಲಾಭ ಗಳಿಸಿದ್ದರೆ, 2014-15ರಲ್ಲಿ ಮಂಡಳಿಯು 391 ಕೋಟಿ ರೂ. ಲಾಭ ಗಳಿಸಿದೆ.

 ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಒಳಗೊಂಡಿದ್ದ ಅಸಂಖ್ಯಾತ ಕೋರ್ಟ್ ಕೇಸ್‌ಗಳಿಂದ ಮತ್ತು ಬಾಹ್ಯ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶದಿಂದ ಮಂಡಳಿಯ ಲಾಭದಲ್ಲಿ ಕುಸಿತ ಉಂಟಾಗಿದೆ. ಇದರಿಂದಾಗಿ ಮುಂಚೆ ಆಟಗಾರನಿಗೆ ರೂ. 100 ಬೋನಸ್ ನೀಡಿದರೆ, ಈಗ ಬಿಸಿಸಿಐಗೆ 50 ರೂ. ಬೋನಸ್ ನೀಡಲು ಮಾತ್ರ ಸಾಧ್ಯವಾಗುತ್ತದೆ.

ವೆಬ್ದುನಿಯಾವನ್ನು ಓದಿ